ನಾವೆಲ್ಲ ಒಂದೇ ಪಕ್ಷದಲ್ಲಿ ಇದ್ದವರು , ಮರಳಿ ಬನ್ನಿ ಉಮೇಶ್ ಕತ್ತಿಗೆ ಜೆಡಿಎಸ್ ಮುಖಂಡ ಹೊರಟ್ಟಿ ಆಹ್ವಾನ -Vishwanews24
ಬೆಂಗಳೂರು:ನಾವೆಲ್ಲ ಒಂದೇ ಪಕ್ಷದಲ್ಲಿ ಇದ್ದವರು. ಹೀಗಾಗಿ ಉಮೇಶ್ ಕತ್ತಿ ಅವರಿಗೆ ಮರಳಿ ಬನ್ನಿ ಎಂದು ಹೇಳಿದ್ದೇವೆ ಎಂಬುದಾಗಿ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಬುಧವಾರ ಶಾಸಕರ ಭವನದಲ್ಲಿ ಬಿಜೆಪಿಯ ಹಿರಿಯ ಮುಖಂಡ, ಶಾಸಕ ಉಮೇಶ್ ಕತ್ತಿ ಅವರ ಜತೆ ಹೊರಟ್ಟಿ ಮಾತುಕತೆ ನಡೆಸಿದ ಬಳಿಕ ಮಾತನಾಡಿದರು.
ಮರಳಿ ಮನೆಗೆ ಬನ್ನಿ ಎಂದು ಆಹ್ವಾನ ಕೊಟ್ಟಿದ್ದೇವೆ. ನಾವೆಲ್ಲ ಒಂದೇ ಪಕ್ಷದಲ್ಲಿ ಇದ್ದವರು. ಮುಂದೇನಾಗುತ್ತೋ ಗೊತ್ತಿಲ್ಲ. ಕೆಲವು ಮುಳ್ಳುಗಳಿವೆ, ಅವೆಲ್ಲವನ್ನು ಸರಿಪಡಿಸಿಕೊಂಡು ಬರುತ್ತೇನೆ ಅಂದಿದ್ದಾರೆ ಎಂದು ಹೊರಟ್ಟಿ ಹೇಳಿದರು.
ಜೆಡಿಎಸ್ ನಾಯಕ ಬಸವರಾಜ್ ಹೊರಟ್ಟಿ ಅವರು ಶಾಸಕರ ಭವನದಲ್ಲಿ ಇಂದು ಉಮೇಶ್ ಕತ್ತಿ ಅವರನ್ನು ಭೇಟಿಯಾಗಿ, ಮರಳಿ ಮನೆಗೆ ಬನ್ನಿ ಎಂದು ಬಹಳ ದಿನಗಳಿಂದ ಹೇಳುತ್ತಿದ್ದೇವೆ. ಕೆಲವು ಮುಳ್ಳುಗಳಿವೆ, ಸರಿಪಡಿಸಿಕೊಂಡು ಬರುತ್ತೇನೆ ಎಂದಿದ್ದಾರೆ.ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ಮಾಡಿದ್ದೇವೆ, ಜೆಡಿಎಸ್ ಪಕ್ಷಕ್ಕೆ ವಾಪಸ್ ಬರುವಂತೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.
