ನಾಸೀರ್ ಹುಸೇನ್ ಅವರಿಗೆ ಪ್ರಮಾಣ ವಚನ ಬೋಧಿಸಬಾರದು ಎಂದು ಬಿಜೆಪಿ ನಾಯಕರ ನಡೆ ಸರಿಯಲ್ಲ : ಎಂ.ಬಿ.ಪಾಟೀಲ್ – Vishwanews24
ಯಾರೋ ಒಬ್ಬ ಮಾಡಿದ ತಪ್ಪಿಗೆ ನಾಸೀರ್ ಅವರನ್ನು ಗುರಿ ಮಾಡುವುದು ತರವಲ್ಲ..
ದೇಶ ವಿರೋಧಿ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮ ಆಗಲೇ ಬೇಕು ..
ವಿಜಯಪುರ: ಪಾಕ್ ಪರ ಘೋಷಣೆ ಕೂಗಿರುವುದು ಘೋರ ಅಪರಾಧ. ಘೋಷಣೆ ಕೂಗಿದವರನ್ನು ರಾಜ್ಯ-ದೇಶದಿಂದಲೇ ಗಡಿಪಾರು ಮಾಡಬೇಕು. ದೇಶ ವಿರೋಧಿ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮ ಆಗಲೇ ಬೇಕು ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಆಗ್ರಹಿಸಿದರು.
ಶನಿವಾರ ಬಬಲೇಶ್ವರ ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಆದರೆ ರಾಜ್ಯಸಭೆಯ ನೂತನ ಸದಸ್ಯ ನಾಸೀರ್ ಹುಸೇನ್ ಅವರಿಗೆ ಪ್ರಮಾಣ ವಚನ ಬೋಧಿಸಬಾರದು ಎಂದು ಬಿಜೆಪಿ ನಾಯಕರ ನಡೆ ಸರಿಯಲ್ಲ. ಕೂಡಿದ ಕಾರ್ಯಕರ್ತರಲ್ಲಿ ಯಾರೋ ಒಬ್ಬ ಮಾಡಿದ ತಪ್ಪಿಗೆ ನಾಸೀರ್ ಅವರನ್ನು ಗುರಿ ಮಾಡುವುದು ತರವಲ್ಲ ಎಂದರು.
ನಾನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ : ಸದಾನಂದಗೌಡ – Vishwanews24
ನನ್ನ ಹಿಂದೆಯೂ ಸಾವಿರಾರು ಜನರು ಇದ್ದಾಗ ಯಾರೋ ಒಬ್ಬ ಘೋಷಣೆ ಕೂಗಿದರೆ ನಾನು ಹೊಣೆಯಾಗಲು ಸಾಧ್ಯವೇ ಎಂದು ಎಂದು ಪ್ರಶ್ನಿಸಿದ ಸಚಿವರು, ಈ ವಿಷಯದಲ್ಲಿ ಯತ್ನಾಳ ಅವರು ನಾಸೀರ್ ಹುಸೇನ್ ಅವರಿಗೆ ಪ್ರಮಾಣ ವಚನ ನೀಡದಂತೆ ಉಪ ರಾಷ್ಟ್ರಪತಿಗಳಿಗೆ ಪತ್ರ ಬರೆಯುತ್ತೇನೆ ಎಂದಿರುವುದು ಸರಿಯಲ್ಲ ಎಂದರು.
ನಾಳೆಯಿಂದ 10 ದಿನ ಎಸ್ಕಾಂಗಳಲ್ಲಿಎಲ್ಲ ಅನ್ಲೈನ್ ಸೇವೆಗಳು ಸ್ಥಗಿತ.. Vishwanews24
