ನಿಗದಿಯಂತೆ ರಾಜ್ಯದಲ್ಲಿ ಜನವರಿ 1 ರಿಂದಲೇ ಶಾಲಾ-ಕಾಲೇಜು ಆರಂಭಿಸಲಾಗುತ್ತದೆ : ಬಿ. ಎಸ್ . ವೈ -Vishwanews24

Featured, ರಾಜ್ಯ ನ್ಯೂಸ್

ನಿಗದಿಯಂತೆ ರಾಜ್ಯದಲ್ಲಿ ಜನವರಿ 1 ರಿಂದಲೇ ಶಾಲಾ-ಕಾಲೇಜು ಆರಂಭಿಸಲಾಗುತ್ತದೆ : ಬಿ. ಎಸ್ . ವೈ -Vishwanews24

ಬೆಂಗಳೂರು : ನಿಗದಿಯಂತೆ ರಾಜ್ಯದಲ್ಲಿ ಜನವರಿ 1ರಿಂದಲೇ ಶಾಲಾ-ಕಾಲೇಜು ಆರಂಭಿಸಲಾಗುತ್ತಿದೆ. ಈ ಬಗ್ಗೆ ಯಾವುದೇ ಬದಲಾವಣೆ ಇಲ್ಲ. ಯಾವುದೇ ಗೊಂದಲಕ್ಕೂ ಪೋಷಕರು ಒಳಗಾಗಬಾರದು. ಈಗಾಗಲೇ ನಿರ್ಧರಿಸಿದಂತೆ ಜನವರಿ 1ರಿಂದ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ತರಗತಿ ಆರಂಭಿಸಲಾಗುತ್ತದೆ ಎಂಬುದಾಗಿ ಸಿಎಂ ಯಡಿಯೂರಪ್ಪ ಸ್ಪಷ್ಟ ಪಡಿಸಿದ್ದಾರೆ.

ಈ ಕುರಿತಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಜನವರಿ 1ರಿಂದಲೇ ನಿಗದಿಯಂತೆ ಶಾಲಾ-ಕಾಲೇಜು ಆರಂಭಿಸಲಾಗುತ್ತಿದೆ. ಶಾಲೆ ಆರಂಭಿಸುವ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಶಾಲಾ ಆರಂಭದ ಬಗ್ಗೆ ಈಗಾಗಲೇ ನಿರ್ಧಾರ ಮಾಡಲಾಗಿದೆ. ಅದರಂತೆಯೇ ಜನವರಿ 1ರಿಂದ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ತರಗತಿ ಆರಂಭಿಸಲಾಗುತ್ತದೆ. ಆದ್ರೂ ಮತ್ತೊಮ್ಮೆ ಚರ್ಚೆ ಮಾಡಲಾಗುತ್ತದೆ ಎಂದು ಸ್ಪಷ್ಟ ಪಡಿಸುವ ಮೂಲಕ, ಪೋಷಕರ ಗೊಂದಲಕ್ಕೆ ತೆರೆ ಎಳೆದಿದ್ದಾರೆ.