ನಿಜವಾದ ದೇಶಪ್ರೇಮಿಗಳು ಗಾಂಧೀಜಿಯವರ ಆದರ್ಶಗಳನ್ನು ರಕ್ಷಿಸಬೇಕು : ರಾಹುಲ್ ಗಾಂಧಿ
ನವದೆಹಲಿ: ಮಹಾತ್ಮಾ ಗಾಂಧೀಯವರ 149 ನೇ ವರ್ಷಾಚರಣೆ ಅಂಗವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಂದೇಶ ರವಾನಿಸಿದ್ದು, ಮಹಾತ್ಮ ಗಾಂಧೀಜಿಯವರ ಸತ್ಯ, ಅಹಿಂಸೆ ಮತ್ತು ಆದರ್ಶಗಳನ್ನು ನಿಜವಾದ ದೇಶಪ್ರೇಮಿಗಳು ರಕ್ಷಿಸಬೇಕು ಎಂದು ಹೇಳಿದ್ದಾರೆ.
ಗಾಂಧೀಜಿಯವರು ಕೇವಲ ಒಂದು ಅಮೂಲ್ಯ ಪ್ರತಿಮೆಯಲ್ಲ. ಅವರು ತಮ್ಮದೇ ಆದ ವಿಚಾರಗಳು ಮತ್ತು ಮೌಲ್ಯಗಳೊಂದಿಗೆ ಬದುಕಿ ಭಾರತದಾದ್ಯಂತ ಅವುಗಳ ಹರಿವಿಗೆ ಕಾರಣರಾಗಿದ್ದಾರೆ. ಸತ್ಯ ಮತ್ತು ಅಹಿಂಸೆಯ ಪರವಾಗಿ ಅವರು ಜೀವಿಸುತ್ತಿದ್ದರು. ದೇಶದ ಭದ್ರ ಬುನಾದಿಗಾಗಿಯೇ ತಮ್ಮ ಪ್ರಾಣ ತೆತ್ತರು. ಹಾಗಾಗಿ ಅವರ ಆದರ್ಶಗಳನ್ನು ನಿಜವಾದ ದೇಶ ಪ್ರೇಮಿಗಳು ರಕ್ಷಿಸಬೇಕಿದೆ ಎಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿ, ತಾಯಿ ಮತ್ತು ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ದೆಹಲಿಯ ರಾಜ್ಘಾಟ್ನಲ್ಲಿರುವ ಮಹಾತ್ಮ ಗಾಂಧಿ ಅವರ ಸ್ಮಾರಕಕ್ಕೆ ತೆರಳಿ ಗೌರವ ಸಲ್ಲಿಸಿದರು..

