ನಿಜವಾದ ಭಾರತೀಯಳಾಗಿದ್ದಕ್ಕೆ ದೀಪಿಕಾ ಪಡುಕೋಣೆಗೆ ಧನ್ಯವಾದ : ಪ್ರಕಾಶ್ ರೈ -Vishwanews24
ಬೆಂಗಳೂರು : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಜೆಎನ್ ಯು ವಿದ್ಯಾರ್ಥಿಗಳ ಪ್ರತಿಭಟನೆಗೆ ಭಾಗಿಯಾಗಿದ್ದಕ್ಕೆ ಬಹುಭಾಷ ನಟ ಪ್ರಕಾಶ್ ರೈ ದೀಪಿಕಾ ಪಡುಕೋಣೆಗೆ ಧನ್ಯವಾದ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಕಾಶ್ ರೈ, ದೀಪಿಕಾ ಪಡುಕೋಣೆ ನಟನೆಯ ಪದ್ಮಾವತ್, ಬಾಜೀರಾವ್ ಮಸ್ತಾನಿ, ರಾಮ್ ಲೀಲಾ ಮತ್ತು ಛಪಾಕ್ ಸಿನಿಮಾದ ಫೋಟೋ ಹಾಕಿ, ಕೆಳಗೆ ಜೆಎನ್ ಯುಗೆ ಭೇಟಿ ನೀಡಿದ ಫೋಟೋ ಹಾಕಿದ್ದಾರೆ. ಜೊತೆಗೆ ರೀಲ್ ಮತ್ತು ರಿಯಲ್ ಲೈಫ್ ನಲ್ಲಿ ನೀವು ಧೈರ್ಯವಂತೆ, ನಿಜವಾದ ಭಾರತೀಯಳಾಗಿದ್ದಕ್ಕೆ ದೀಪಿಕಾ ಪಡುಕೋಣೆಗೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.
ಜೆಎನ್ ಯು ವಿದ್ಯಾರ್ಥಿಗಳು ಮತ್ತು ಅಲ್ಲಿನ ಶಿಕ್ಷಕರ ಮೇಲೆ ದಾಳಿಯಾದ ನಂತರ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಭೇಟಿ ನೀಡಿ, ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು.
Thank you @deepikapadukone … thank you for being a true INDIAN .. pic.twitter.com/eHiYNCXA1R
— Prakash Raj (@prakashraaj) January 7, 2020
