ನಿಜವಾದ ರೈತರು ಹಿಂಸಾಚಾರ ನಡೆಸಲು ಸಾಧ್ಯವಿಲ್ಲ : ಶೋಭಾ ಕರಂದ್ಲಾಜೆ -Vishwanews24
ನಿಜವಾದ ರೈತರು ಹಿಂಸಾಚಾರ ನಡೆಸಲು ಸಾಧ್ಯವಿಲ್ಲ : ಶೋಭಾ ಕರಂದ್ಲಾಜೆ -Vishwanews24
ಚಿಕ್ಕಮಗಳೂರು: ಪ್ರತಿಭಟನೆಯ ನೇತೃತ್ವವನ್ನ ರೈತರು ವಹಿಸಿಲ್ಲ ಅನ್ನೋದಕ್ಕೆ ನಿನ್ನೆ ಘಟನೆಯೇ ಸಾಕ್ಷಿ. ಕೆಂಪು ಕೋಟೆ ಹತ್ತಿದವರು ಯಾರೂ ರೈತರಲ್ಲ. ಗಣರಾಜ್ಯ ತ್ರಿವರ್ಣ ಧ್ವಜ ಹಾರಿಸುವ ದಿನವೇ ಕೆಟ್ಟ ಘಟನೆ ನಡೆದಿರುವುದು ದುರಂತ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಆರಂಭದಿಂದಲೂ ಹೇಳುತ್ತಿದ್ದೆ. ಪ್ರತಿಭಟನೆಯ ನೇತೃತ್ವವನ್ನು ರೈತರು ವಹಿಸಿಲ್ಲ. ಉಮ್ಮರ್ ಖಾಲಿದ್ ಬಿಡುಗಡೆಗೊಳಿಸುವಂತೆ ದೇಶದ್ರೋಹಿ ಶಕ್ತಿ ವಹಿಸಿವೆ. ಕೆಂಪು ಕೋಟೆಗೆ ನುಗ್ಗಿ ರೈತರು ಕೆಟ್ಟ ಪದ್ಧತಿಯನ್ನ ಹಾಕಿಕೊಟ್ಟಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕೆ 2 ಲಕ್ಷ ರೂ. ದೇಣಿಗೆ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್ -Vishwanews24
ಕೆನಡಾದ ಖಲಿಸ್ತಾನ್ ಮೂವ್‍ಮೆಂಟ್‍ನವರು ಈ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದಾರೆ. ಉಮ್ಮರ್ ಖಾಲಿದ್‍ಗೆ ಬೆಂಬಲ ಕೊಟ್ಟಿದ್ದವರು ಅವರು ಇದಕ್ಕೆ ಬೆಂಬಲ ಕೊಟ್ಟಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಭಾರತ ವಿರೋಧಿ ಚಟುವಟಿಕೆ ಮಾಡುತ್ತಿದ್ದವರು ಭಾಗಿಯಾಗಿದ್ದಾರೆ. ಜೆಎನ್‍ಯುನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದವರು ಇದರಲ್ಲಿ ಜೋಡಣೆಯಾಗಿದ್ದಾರೆ.
ನಾವು ಆರಂಭದಿಂದಲೂ ಹೇಳಿಕೊಂಡು ಬಂದಿದ್ದು ಇವತ್ತು ಸಾಭೀತಾಗಿದೆ. ನಿಜವಾದ ರೈತರು ಹಿಂಸಾಚಾರ ನಡೆಸಲು ಸಾಧ್ಯವಿಲ್ಲ. ರೈತರ ಹೆಸರಲ್ಲಿ ಈ ಪ್ರತಿಭಟನೆಯ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದು ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.
