ನಿಟ್ಟೂರು ಪ್ರೌಢಶಾಲೆಯಲ್ಲಿ ಶ್ರೀ ಪಿ.ಎಲ್. ಅಣ್ಣಾಜಿ ರಾವ್ ದತ್ತಿನಿಧಿ ವಿದ್ಯಾರ್ಥಿವೇತನ ವಿತರಣೆ -Vishwanews24
ನಿಟ್ಟೂರು ಪ್ರೌಢಶಾಲೆಯಲ್ಲಿ ಶ್ರೀ ಪಿ.ಎಲ್. ಅಣ್ಣಾಜಿ ರಾವ್ ದತ್ತಿನಿಧಿ ವಿದ್ಯಾರ್ಥಿವೇತನ ವಿತರಣೆ -Vishwanews24
ಉಡುಪಿ : ಶಾಲೆಯಲ್ಲಿ ದಿನಾಂಕ ೨೬-೦೧-೨೦೨೧ರಂದು ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ೨೫ ವಿದ್ಯಾರ್ಥಿಗಳಿಗೆ ಶ್ರೀ ಪಿ.ಲ್. ಅಣ್ಣಾಜಿ ರಾವ್ ದತ್ತಿನಿಧಿಯಿಂದ ತಲಾ ಒಂದುಸಾವಿರ ರೂಪಾಯಿ ವಿದ್ಯಾರ್ಥಿವೇತನವನ್ನು ಶಾಲೆಯ ಹಳೆವಿದ್ಯಾರ್ಥಿ ಗಿರೀಶ್ ಶೆಣೈ ವಿತರಿಸಿದರು.,
ವಿದ್ಯಾರ್ಥಿಗಳು ತಮ್ಮ ಬಡತನವನ್ನು ಲೆಕ್ಕಿಸದೆ ಕಲಿಕೆಯಲ್ಲಿ ಸಾಧನೆಗೈಯಬೇಕು. ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ, ಎಲ್ಲ ಅವಕಾಶಗಳನ್ನು ಬಳಸಿಕೊಂಡು ವ್ಯಕ್ತಿತ್ವ ವಿಕಸಿಸಿಕೊಳ್ಳಬೇಕು ಎಂದರು. ಶಿಕ್ಷಕ ಎಚ್.ಎನ್. ಶೃಂಗೇಶ್ವರ ಪ್ರ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅನಸೂಯ ಧನ್ಯವಾದ ಸಮರ್ಪಿಸಿದರು.
