ನಿಮ್ಮ ಧ್ವಜದ ಮೇಲೆ ಚಂದ್ರ ಇದ್ದರೆ, ಚಂದ್ರನ ಮೇಲೆ ನಮ್ಮ ಧ್ವಜ ಇದೆ : ಪಾಕ್ ಗೆ ಹರ್ಭಜನ್ ಸಿಂಗ್ -Vishwanews24
ನವದೆಹಲಿ : ಇಸ್ರೋದ ಈ ಮಹತ್ವದ ಸಾಧನೆಗೆ ದೇಶದೆಲ್ಲೆಡೆ ಸಂಭ್ರಮ ವ್ಯಕ್ತವಾಗಿದ್ದು ಎಲ್ಲರೂ ಅಭಿನಂದನಾ ಸಂದೇಶವನ್ನು ಹಾಕುತ್ತಿದ್ದಾರೆ. ಇದಕ್ಕೆ ರಾಜಕಾರಣಿಗಳು, ಚಿತ್ರತಾರೆಯರು, ಕ್ರಿಕೆಟಿಗರು ಯಾರೂ ಹೊರತಾಗಿಲ್ಲ. ಆದರೆ ಕ್ರಿಕೆಟಿಗ ಹರ್ಭಜನ್ ಸಿಂಗ್ ತಾವು ಸ್ವಲ್ಪ ಭಿನ್ನವಾಗಿ ಚಂದ್ರಯಾನವನ್ನು ಸಂಭ್ರಮಿಸಿದ್ದು ತಮ್ಮ ಸಂದೇಶದ ಮುಖೇನ ಪರೋಕ್ಷ ಆಗಿ ಪಾಕಿಸ್ತಾನಕ್ಕೆ ಕುಟುಕಿದ್ದಾರೆ.
ಹರ್ಭಜನ್ ಸಿಂಗ್ ಟ್ವೀಟರ್ ನಲ್ಲಿ, ಪಾಕಿಸ್ತಾನದ ಸೇರಿದಂತೆ ಕೆಲವು ದೇಶದ ಮೇಲೆ ಚಂದ್ರನ ಚಿತ್ರ ಇದೆ ಎಂದು ಬರೆದು, ಟರ್ಕಿ, ಲುಬಿಯಾ, ಟುನೀಶಿಯಾ, ಅಜೆರ್ಬೈಜಾನ್, ಅಲ್ಜೀರಿಯಾ, ಮಲೇಷ್ಯಾ, ಮಾಲ್ಡೀವ್ಸ್ ಧ್ವಜದ ಎಮೋಜಿ ಹಾಕಿ, ಚಂದ್ರನ ಮೇಲೆ ನಮ್ಮ ಧ್ವಜ ಇದೆ ಎಂದು ಭಾರತ, ಅಮೆರಿಕ, ಚೀನಾ ಹಾಗೂ ರಷ್ಯಾ ಧ್ವಜವನ್ನು ಹಾಕಿ ಟ್ವೀಟ್ ಮಾಡಿದ್ದಾರೆ.

ಆಂಧ್ರ ಪ್ರದೇಶದ ನೆಲ್ಲೋರ್ ಜಿಲ್ಲೆಯ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಸೋಮವಾರ (ಜುಲೈ 22) ಚಂದ್ರಯಾನ್-2 ರಾಕೆಟ್ ಉಡಾವಣೆ ಯಶಸ್ವಿಯಾಗಿತ್ತು. ಇಸ್ರೋ ತಂಡದ ಶ್ರಮವನ್ನು ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ಸೇರಿದಂತೆ ಅನೇಕ ಕ್ರಿಕೆಟಿಗರು ಶ್ಲಾಘಿಸಿದ್ದರು.

