ನಿರ್ದೇಶಕನಿಗೆ ಗುಂಡು ಹಾರಿಸಿ ಬೆದರಿಕೆ: ನಟ ತಾಂಡವ್ ರಾಮ್ ಅರೆಸ್ಟ್ – vishwanews24

Featured, ರಾಜ್ಯ ನ್ಯೂಸ್

ಸಿನಿಮಾ ಅರ್ಧಕ್ಕೆ ನಿಂತಿದ್ದಕ್ಕೆ ನಿರ್ದೇಶಕನಿಗೆ ಗುಂಡು ಹಾರಿಸಿ ಬೆದರಿಕೆ: ನಟ ತಾಂಡವ್ ರಾಮ್ ಅರೆಸ್ಟ್

‘ಜೋಡಿಹಕ್ಕಿ’ ಸೀರಿಯಲ್ ಖ್ಯಾತಿಯ ನಟ ತಾಂಡವ್ ರಾಮ್  ಕೊಲೆ ಯತ್ನದ ಕೇಸ್‌ನಲ್ಲಿ ಚಂದ್ರಲೇಔಟ್ ಪೊಲೀಸರು ಬಂಧಿಸಿದ್ದಾರೆ. ‘ದೇವನಾಂಪ್ರಿಯ’ ಸಿನಿಮಾ ಅರ್ಧಕ್ಕೆ ನಿಂತಿದ್ದಕ್ಕೆ ನಿರ್ದೇಶಕ ಭರತ್  ಮೇಲೆ ತಾಂಡವ್ ಗುಂಡು ಹಾರಿಸಿದ್ದಕ್ಕೆ ಈಗ ಪೊಲೀಸರ ಅತಿಥಿಯಾಗಿದ್ದಾರೆ.

‘ದೇವನಾಂಪ್ರಿಯ’ ಸಿನಿಮಾದಲ್ಲಿ ತಾಂಡವ್ ರಾಮ್ ನಾಯಕ ನಟನಾಗಿ ನಟಿಸುತ್ತಿದ್ದರು. ಕಾರಣಾಂತರಗಳಿಂದ ‘ದೇವನಾಂಪ್ರಿಯ’ ಸಿನಿಮಾದ ಶೂಟಿಂಗ್ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಈ ಹಿನ್ನೆಲೆ ಚಂದ್ರಲೇಔಟ್‌ನ ಕಚೇರಿಯಲ್ಲಿ ಸಿನಿಮಾಗೆ ಸಂಬಂಧಿಸಿದಂತೆ ಮಾತುಕತೆ ನಡೆಯುತ್ತಿತ್ತು. ಆಗ ತಾಂಡವ್‌ಗೂ ಚಿತ್ರದ ನಿರ್ದೇಶಕ ಭರತ್‌ಗೂ ವಾಗ್ವಾದ ನಡೆದಿದೆ. ಈ ವೇಳೆ, ಸಿಟ್ಟಿನಿಂದ ಗನ್ ತೆಗೆದು ಭರತ್ ಮೇಲೆ ತಾಂಡವ್ ಗುಂಡು ಹಾರಿಸಿದ್ದಾರೆ.

ಅದೃಷ್ಟವಶಾತ್ ಗುಂಡು ಡೈರೆಕ್ಟರ್ ಭರತ್‌ಗೆ ತಗುಲದೆ ಗೋಡೆಗೆ ಬಿದ್ದಿದೆ. ಇದೀಗ ಭರತ್ ದೂರಿನ ಮೇರೆಗೆ ನಟ ತಾಂಡವ್ ಅವರನ್ನು ಚಂದ್ರಲೇಔಟ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಲೈಂಗಿಕ ದೌರ್ಜನ್ಯ ಪ್ರಕರಣ: ಮಲಯಾಳಂ ನಟ ಸಿದ್ದಿಕ್‌ ಗೆ ನಿರೀಕ್ಷಣಾ ಜಾಮೀನು ಮಂಜೂರು – vishwanews24

 

Leave a Reply