ನಿರ್ಭಯಾ ಅತ್ಯಾಚಾರ, ಹತ್ಯೆ ಪ್ರಕರಣ : ಆರೋಪಿಗೆ ಗಲ್ಲು ಶಿಕ್ಷೆ ಖಾಯಂ ; ಸುಪ್ರೀಂ ತೀರ್ಪು -Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ: ನಿರ್ಭಯಾ ಅತ್ಯಾಚಾರ, ಹತ್ಯೆ ಪ್ರಕರಣದ ಆರೋಪಿ ಅಕ್ಷಯ್​ಕುಮಾರ್​ಗೆ ಸುಪ್ರೀಂಕೋರ್ಟ್​ ಗಲ್ಲುಶಿಕ್ಷೆ ಕಾಯಂಗೊಳಿಸಿ  ತೀರ್ಪು ನೀಡಿದೆ.

ಪ್ರಕರಣದ ಆರೋಪಿ ಅಕ್ಷಯ್​ ಕುಮಾರ್​ ತನಗೆ ಕೋರ್ಟ್​ ವಿಧಿಸಿರುವ ಗಲ್ಲುಶಿಕ್ಷೆ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಸ್ತಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​ ತೀರ್ಪು ನೀಡಿತು.

ಸುಪ್ರೀಂಕೋರ್ಟ್​ ನ್ಯಾಯಮೂರ್ತಿ ಆರ್​.ಭಾನುಮತಿ ನೇತೃತ್ವದ ತ್ರಿಸದಸ್ಯರ ಪೀಠ ಅರ್ಜಿ ವಿಚಾರಣೆ ನಡೆಸಿತು. ಮೊದಲು ಅಪರಾಧಿ ಅಕ್ಷಯ್​ ಕುಮಾರ್​ ಪರ ವಾದ ಮಂಡನೆ ಮಾಡಿದ ವಕೀಲ ಎ.ಪಿ.ಸಿಂಗ್, ​ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟ ದಾಖಲೆಗಳು ಹಾಗೂ ತನಿಖೆಯಲ್ಲಿ ದೋಷವಿದೆ. ಇಲ್ಲಿ ಮಾಧ್ಯಮಗಳು ಮತ್ತು ಸಾರ್ವಜನಿಕರ ಒತ್ತಡವೇ ಹೆಚ್ಚಾಗಿದೆ. ನನ್ನ ಕಕ್ಷಿದಾರರಾದ ಅಕ್ಷಯ್​ ಕುಮಾರ್​ ಸಿಂಗ್​ ಅವರನ್ನು ವೃಥಾ ಸಿಕ್ಕಿಸುವ ಪ್ರಯತ್ನ ನಡೆದಿದೆ ಎಂದು ಹೇಳಿದರು.

2012ರ ಡಿಸೆಂಬರ್ 16ರಂದು 23 ವರ್ಷದ ಯುವತಿ ನಿರ್ಭಯಾಳ ಮೇಲೆ ಆರು ಮಂದಿ ಚಲಿಸುತ್ತಿರುವ ಬಸ್ಸಿನಲ್ಲಿ ಅತ್ಯಾಚಾರವೆಸಗಿ ನಂತರ ಭೀಕರವಾಗಿ ಹತ್ಯೆಗೈದ್ದರು. ಅಕ್ಷಯ್ ಪರ ವಕೀಲರು ಕೇವಲ 21 ನಿಮಿಷಗಳಲ್ಲಿ ಎಲ್ಲಾ 6 ಮಂದಿ ಬಸ್ಸಿನಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಲು ಸಾಧ್ಯವಿಲ್ಲ ಎಂದು ಆರೋಪಿ ಪರ ವಾದ ಮಂಡಿಸುವಾಗ ಹೇಳಿ.ತಿಹಾರ್ ಜೈಲಿನ ನಿವೃತ್ತ ಅಧಿಕಾರಿಯ ಆದೇಶವನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.

ಅರ್ಜಿಯನ್ನು ನಿರಾಕರಿಸುವಂತೆ ಒತ್ತಾಯಿಸಿದ ನಿರ್ಭಯಾ ಪೋಷಕರ ಪರ ವಕೀಲರು, ನಿರ್ಭಯಾ ಕೊಲೆ ಆರೋಪಿಗಳಿಗೆ ಸರಿಯಾದ ಶಿಕ್ಷೆ ನೀಡಿ ನ್ಯಾಯ ಒದಗಿಸದಿದ್ದರೆ ದೇವರು ಸುಮ್ಮನೆ ಬಿಡುವುದಿಲ್ಲ. ಅವರಿಗೆ ಯಾವುದೇ ಕಾರಣಕ್ಕೂ ಜೀವದಾನ ನೀಡಬಾರದು ಎಂದು ಕೋರ್ಟ್ ಗೆ ಮನವಿ ಸಲ್ಲಿಸಿದ್ದರು.