ನೀಟ್ ಪರೀಕ್ಷೆಯಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ : ಯು.ಟಿ ಖಾದರ್ – Vishwanews24
ರಾಜ್ಯದಲ್ಲಿ ನೀಟ್ ಬೇಡ, ಸಿಇಟಿ ಪರೀಕ್ಷೆ ಜಾರಿಯಾಗಲಿ ..
ಉಕ್ರೇನ್ ಮತ್ತು ರಷ್ಯಾ ಯುದ್ಧದಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಿದೆ..
ಬೆಂಗಳೂರು: ನೀಟ್ ಪರೀಕ್ಷೆಯಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಸೀಟು ಸಿಗುತ್ತಿಲ್ಲ. ನೀಟ್ ತೆಗೆದುಹಾಕಿ ಸಿಇಟಿ ಆಧಾರದಲ್ಲಿ ಸೀಟ್ ಕೊಡಲಿ. ನೀಟ್ ಬೇಡ ಸಿಇಟಿ ಪರೀಕ್ಷೆ ಜಾರಿಯಾಗಲಿ ಎಂದು ವಿಧಾನ ಸಭೆ ವಿರೋಧ ಪಕ್ಷದ ಉಪನಾಯಕ ಯುಟಿ ಖಾದರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಕ್ರೇನ್ ಮತ್ತು ರಷ್ಯಾ ಯುದ್ಧದಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅವರ ಸಮಸ್ಯೆ ಬಗೆಹರಿಸಬೇಕು. ರಾಜೀವ್ ಗಾಂಧಿ ವಿವಿ ಜತೆ ಚರ್ಚೆ ಮಾಡಿ ಮಾರ್ಗ ಹುಡುಕಿಕೊಳ್ಳಬೇಕು ಎಂದು ಆಗ್ರಹಿಸಿದರು.
ಕರ್ನಾಟಕದ ಇಬ್ಬರು ಮಹಿಳಾ ಸಾಧಕಿಯರು ಸೇರಿ 29 ಮಂದಿಗೆ ನಾರಿ ಶಕ್ತಿ ಪುರಸ್ಕಾರ ಪ್ರದಾನ – Vishwanews24
