ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವಿವಾಹಿತ ಮಹಿಳೆ – vishwanews24

Featured, ರಾಜ್ಯ ನ್ಯೂಸ್

ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವಿವಾಹಿತ ಮಹಿಳೆ

ಚಿಕ್ಕಮಗಳೂರು: ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮೂಡಿಗೆರೆಯ ಚಂದುವಳ್ಳಿ ಗ್ರಾಮದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ಸುಭಿಕ್ಷಾ (25) ಎಂದು ಗುರುತಿಸಲಾಗಿದೆ. ಕಳೆದ 4 ವರ್ಷಗಳ ಹಿಂದೆ ಚಂದುವಳ್ಳಿಯ ಪ್ರವೀಣ್ ಎಂಬವನ ಜೊತೆ ಸುಭಿಕ್ಷಾಳನ್ನು ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಎರಡೂವರೆ ವರ್ಷದ ಒಂದು ಗುಂಡು ಮಗು ಸಹ ಇದೆ. ಮಹಿಳೆಯ ಆತ್ಮಹತ್ಯೆಗೆ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.

ಉಡುಪಿ : ನಾಮ ಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಬಳಕೆ ಕಡ್ಡಾಯ – vishwanews24

ಸೋಮವಾರ ಸಂಜೆ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದು, ಸ್ಥಳಕ್ಕೆ ತಹಶೀಲ್ದಾರ್ ಆಗಮಿಸದ ಹಿನ್ನೆಲೆ ಮೃತದೇಹವನ್ನು ಕೆಳಗಿಳಿಸದೆ ಪೊಲೀಸರು ಕಾಯುತ್ತಿದ್ದಾರೆ. ಮದುವೆಯಾಗಿ 7 ವರ್ಷದ ಒಳಗೆ ಗೃಹಿಣಿ ಆತ್ಮಹತ್ಯೆಗೆ ಶರಣಾದರೆ ತಹಶೀಲ್ದಾರ್ ಸ್ಥಳ ಮಹಜರು ಮಾಡಿದ ಬಳಿಕ ಶವ ಕೆಳಗಿಳಿಸಬೇಕು ಎಂಬ ನಿಯಮವಿದೆ. ಇದೇ ಕಾರಣಕ್ಕೆ ತಹಶೀಲ್ದಾರ್ ಬಂದ ಬಳಿಕ ಪೊಲೀಸರು ಶವ ಕೆಳಗಿಳಿಸಿ ಪರಿಶೀಲನೆ ನಡೆಸಲಿದ್ದಾರೆ.

ಈ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆ ಅರ್ಜಿ ಆಹ್ವಾನ – vishwanews24

Leave a Reply