ನೈತಿಕವಾಗಿ ನಾವು ಗೆದ್ದಿದ್ದೇವೆ, ಈಗ ನಮ್ಮ ಮನೆ ಸ್ವಚ್ಛವಾಗಿದೆ : ಸಿದ್ದರಾಮಯ್ಯ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾದ ಬೆನ್ನಲ್ಲೇ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಸಂಖ್ಯೆಯ ಲೆಕ್ಕದಲ್ಲಿ ಸೋತರೂ ನಾವು ನೈತಿಕವಾಗಿ ಗೆದ್ದಿದ್ದೇವೆ ಎಂದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಹಣ ಮತ್ತು ತೋಳ್ಬಲ ಬಳಸಿಕೊಂಡು ಸಂಖ್ಯೆಯ ಲೆಕ್ಕದಲ್ಲಿ‌ ಗೆದ್ದಿರುವ ಬಿಜೆಪಿ ನೈತಿಕವಾಗಿ ಸೋತಿದೆ. ಆದರೆ, ಸಂಖ್ಯೆಯ ಲೆಕ್ಕದಲ್ಲಿ ನಮ್ಮ ಮೈತ್ರಿ ಸರ್ಕಾರ ಸೋತರೂ ಅವರ ಮಟ್ಟಕ್ಕೆ ಇಳಿಯದೆ ನೈತಿಕವಾಗಿ ನಾವು ಗೆದ್ದಿದ್ದೇವೆ. ಈಗ ನಮ್ಮ ಮನೆ ಸ್ವಚ್ಛವಾಗಿದೆ” ಎಂದು ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷದವರ ಕುಮ್ಮಕ್ಕಿನಿಂದಲೇ ಮೈತ್ರಿ ಪಕ್ಷಗಳ ಶಾಸಕರು ರಾಜೀನಾಮೆ ನೀಡಿದ್ದಾರೆ.  ಬಿಜೆಪಿಯವರಿಗೆ ಸಂವಿಧಾನ್ಸದ ಮೇಲೆ ನಂಬಿಕೆಯಿಲ್ಲ. ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಹೊರಟಿದ್ದಾರೆ ಎಂದು ಕಿಡಿ ಕಾರಿದರು.