ಪಕ್ಷ ವಿರೋಧಿ ಕೆಲಸ ಮಾಡುತ್ತಿರುವ ವಿಜಯೇಂದ್ರಗೆ ನೋಟಿಸ್ ನೀಡಿ: ರಮೇಶ್ ಜಾರಕಿಹೊಳಿ – vishwanews24
ವಿಜಯೇಂದ್ರಪಕ್ಷ ವಿರೋಧಿ ಕೆಲಸ ಮಾಡುತ್ತಿದ್ದಾರೆ, ಹಾಗಾಗಿ ನಮಗೆ ಈ ಪರಿಸ್ಥಿತಿ : ರಮೇಶ್ ಜಾರಕಿಹೊಳಿ
ನವದೆಹಲಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪಕ್ಷ ವಿರೋಧಿ ಕೆಲಸ ಮಾಡುತ್ತಿದ್ದು, ಮೊದಲು ಅವರಿಗೆ ನೋಟಿಸ್ ನೀಡಬೇಕು. ವಿಜಯೇಂದ್ರ ಪರ ಕೆಜೆಪಿ ನಾಯಕರು ಮಾತ್ರ ಮಾತನಾಡುತ್ತಿದ್ದು, ಬಿಜೆಪಿ ನಾಯಕರು ಮಾತನಾಡುತ್ತಿಲ್ಲ ಎಂದು ಶಾಸಕ ರಮೇಶ್ ಜಾರಕಿಹೊಳಿ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ವಕ್ಫ್ ಭೂಕಬಳಿಕೆ ವಿರುದ್ಧ ಮಾಡಿದ ಹೋರಾಟದ ವರದಿ ಸಲ್ಲಿಸಲು ದೆಹಲಿಗೆ ಬಂದಿದ್ದು, ಸಹಜವಾಗಿ ಬೇರೆ ವಿಚಾರಗಳ ಬಗ್ಗೆ ಮಾತನಾಡುತ್ತೇವೆ. ವಿಜಯೇಂದ್ರ ಅವರು ಅಧ್ಯಕ್ಷರಾಗಿ ಪಕ್ಷ ವಿರೋಧಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ನಮಗೆ ಈ ಪರಿಸ್ಥಿತಿ ಬಂತು. ಪಕ್ಷದ ಹಿತದೃಷ್ಟಿಯಿಂದ ವಕ್ಫ್ ಹೋರಾಟ ಮಾಡಿದೆವು ಎಂದು ಸ್ಪಷ್ಟನೆ ನೀಡಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ನೋಟಿಸ್ ಕೊಡ್ತಾರಂತೆ ಗೊತ್ತಿತ್ತು. ಯತ್ನಾಳ್ ಅವರು ನೋಟಿಸ್ಗೆ ಉತ್ತರ ಕೊಡುತ್ತಾರೆ. ವಿಜಯೇಂದ್ರ ಅವರಿಗೆ ಯಾವಾಗ ನೋಟಿಸ್ ಕೊಡುತ್ತೀರಿ? ಎಂದು ಪ್ರಶ್ನಿಸಿದರು.
