ಪಕ್ಷದಲ್ಲಿ ನಮಗೆ ಯಾವುದೇ ಸ್ಥಾನಮಾನ ಬೇಡ, ಕ್ಷೇತ್ರದ ಅಭಿವೃದ್ಧಿ ಕಡೆ ಗಮನ ಹರಿಸುತ್ತೇನೆ: ಉಮೇಶ್ ಕತ್ತಿ -Vishwanews24
ಹುಕ್ಕೇರಿ:ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಶಾಸಕನಾಗಿ ಮುಂದುವರಿಯುತ್ತೇನೆ. ಪಕ್ಷದಲ್ಲಿ ನಮಗೆ ಯಾವುದೇ ಸ್ಥಾನಮಾನ ಬೇಡ ಎಂದು ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.
ಹೈಕಮಾಂಡ್ ನಿರ್ಣಯವೇ ಅಂತಿಮ ಎಂಬ ಅಂಶ ಹೊರಬೀಳುತ್ತಿದ್ದಂತೆ ನಾನು ಯಾವ ಸ್ಥಾನಮಾನವನ್ನೂ ಕೇಳಿಲ್ಲ. ಕ್ಷೇತ್ರದ ಅಭಿವೃದ್ಧಿ ಕಡೆ ಗಮನ ಹರಿಸುತ್ತೇನೆ ಎಂದು ಹೇಳುವ ಮೂಲಕ ಸೈಲೆಂಟ್ ಆಗಿದ್ದಾರೆ.
ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಸುರಪುರ ಶಾಸಕ ರಾಜೇಗೌಡ ಮುಂತಾದವರಿಗೆ ಸಚಿವ ಸ್ಥಾನ ಸಿಗಲಿವೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈಗ ಸುಮ್ಮನಾಗಿರುವ ಅವರು ನಾನು ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸುತ್ತೇನೆ ಎಂದು ಹೇಳಿದ್ದಾರೆ. ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅಸಮಾಧಾನಗೊಂಡಿದ್ದ ಕತ್ತಿ ಅವರನ್ನು ಯಡಿಯೂರಪ್ಪ ಅವರು ಕರೆಸಿ ಮಾತುಕತೆ ನಡೆಸಿದ್ದರು.
