ಪಡುಬಿದ್ರಿ : ಕಂಪೆನಿ ಹೊರಬಿಡುವ ರಾಸಾಯನಿಕ ಮಿಶ್ರಿತ ನೀರಿನಿಂದ ಗ್ರಾಮಸ್ಥರಿಗೆ ತೊಂದರೆ – vishwanews24

Featured, ಉಡುಪಿ

ಪಡುಬಿದ್ರಿ : ಕಂಪೆನಿ ಹೊರಬಿಡುವ ರಾಸಾಯನಿಕ ಮಿಶ್ರಿತ ನೀರಿನಿಂದ ಗ್ರಾಮಸ್ಥರಿಗೆ ತೊಂದರೆ

ಪಡುಬಿದ್ರಿ: ಇಲ್ಲಿಗೆ ಸಮೀಪದ ನಂದಿಕೂರಿನಲ್ಲಿ ಎಂ11 ಕಂಪನಿ ಹೊರ ಸೂಸುವ ರಾಸಾಯನಿಕ ಮಿಶ್ರಿತ ನೀರಿನಿಂದ ಗ್ರಾಮಸ್ತರು ಸಮಸ್ಯೆ ಎದುರಿಸುತ್ತಿದ್ದು ಸ್ಥಳಕ್ಕೆ ಪಲಿಮಾರು ಗ್ರಾ.ಪಂ. ಅಧ್ಯಕ್ಷೆ ಸೌಮ್ಮಲತಾ ಶೆಟ್ಟಿ ಭೇಟಿ ನೀಡಿದರು.

ಸ್ಥಳೀಯ ಹೋರಾಟಗಾರರು ಹಾಗೂ ಪರಿಸರ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಅವರು ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು. ಕಂಪೆನಿಯ ಆಯಿಲ್ ಮಿಶ್ರಿತ ನೀರು ಇಡೀ ಪುದೇಶವನ್ನು ಗಬ್ಬೆದ್ದು ನಾರುವಂತೆ ಮಾಡಿದೆ. ಐದು ನಿಮಿಷ ನಿಂತರೂ ತಲೆ ಸುತ್ತು ಬರುತ್ತೆ. ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯರು ತುಂಬ ಸಮಸ್ಯೆ ಎದುರಿಸುತ್ತಿದ್ದಾರೆ.

ವಿಚ್ಛೇದಿತ ಮುಸ್ಲಿಂ ಮಹಿಳೆ  ತನ್ನ ಪತಿಯಿಂದ ಜೀವನಾಂಶ ಪಡೆಯಬಹುದು : ಸುಪ್ರೀಂ ಕೋರ್ಟ್  ಮಹತ್ವದ ತೀರ್ಪು – vishwanews24

ಮಳೆ ನೀರಿನೊಂದಿಗೆ ಹೊರ ಬರುವ ಕಂಪನಿಯ ರಾಸಾಯನಿಕ ಮಿಶ್ರಿತ ನೀರನ್ನು ಪರಿಸರ ಇಲಾಖೆ ಅಧಿಕಾರಿಗಳು ಪರೀಕ್ಷೆಗೊಳಪಡಿಸಲು ತೆಗೆದುಕೊಂಡು ಹೋಗಿದ್ದಾರೆ. ಜನರಿಗೆ ಸಮಸ್ಯೆ ಒಡ್ಡುತ್ತಿರುವ ಈ ಕಂಪನಿಯ ವಿರುದ್ಧ ಹೋರಾಟಕ್ಕೂ ನಾವು ಸಿದ್ಧ. ಈ ಬಗ್ಗೆ ಗ್ರಾ.ಪಂ. ಮಟ್ಟದಲ್ಲೂ ಕಂಪನಿಯ ವಿರುದ್ಧ ನಿರ್ಣಯ ಕೈಗೊಳ್ಳುವುದಾಗಿ ಪಂಚಾಯತ್ ಅಧ್ಯಕ್ಷೆ ತಿಳಿಸಿದ್ದಾರೆ.

ನೇಹಾ ಕೊಲೆ ಪ್ರಕರಣ: ಮದುವೆಗೆ ನಿರಾಕರಿಸಿದ್ದಕ್ಕೆ ಹತ್ಯೆ : ಸಿಐಡಿ ಅಧಿಕಾರಿಗಳ ಸ್ಪಷ್ಟನೆ – vishwanews24

Leave a Reply