ಪಡುಬಿದ್ರಿ : ಖಡೇಶ್ವರೀ ಬ್ರಹ್ಮಸ್ಥಾನದಲ್ಲಿ ಜ. 19ರಿಂದ ಮಾ.11ರ ವರೆಗೆ ಢಕ್ಕೆಬಲಿ ಸೇವೆ – Vishwanews24
ಪಡುಬಿದ್ರಿ : ಖಡೇಶ್ವರೀ ಬ್ರಹ್ಮಸ್ಥಾನದಲ್ಲಿ ಜ. 19ರಿಂದ ಮಾ.11ರ ವರೆಗೆ ಢಕ್ಕೆಬಲಿ ಸೇವೆ
ಪಡುಬಿದ್ರಿ : ಇಲ್ಲಿನ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಢಕ್ಕೆಬಲಿ ಸೇವೆಗಳು ಜ. 19ರಂದು ಮಂಡಲ ಹಾಕುವ ಢಕ್ಕೆಬಲಿ ಸೇವೆಯೊಂದಿಗೆ ಆರಂಭಗೊಳ್ಳಲಿವೆ. ಮಾ. 11ರಂದು ಮಂಡಲ ವಿಸರ್ಜನೆಯೊಂದಿಗೆ ಢಕ್ಕೆಬಲಿ ಸೇವೆಗಳು ಮುಕ್ತಾಯಗೊಳ್ಳಲಿವೆ.

ಈ ಬಾರಿ ಒಟ್ಟು 36 ಢಕ್ಕೆಬಲಿ ಸೇವೆಗಳು ಸಂಪನ್ನಗೊಳ್ಳಲಿವೆ. ಹೆಚ್ಚಿನ ಮಾಹಿತಿಗೆ ಸೇವಾದಾರರು ಬ್ರಹ್ಮಸ್ಥಾನದ ಕಚೇರಿಯನ್ನು ಅಥವಾ ಖಡ್ಗೇಶ್ವರೀ ವನದುರ್ಗಾ ಟ್ರಸ್ಟ್ನ ಕಾರ್ಯದರ್ಶಿ ವೈ.ಎನ್. ರಾಮಚಂದ್ರ ರಾವ್ ಅವರನ್ನು ಸಂಪರ್ಕಿಸುವಂತೆ ವಿನಂತಿಸಲಾಗಿದೆ.
ಶಿರ್ವ: ಪಿಲಾರುಕಾನ ಪರಿಸರದಲ್ಲಿ ಕಾಡುಕೋಣಗಳ ಹಾವಳಿ , ಭಯಭೀತರಾದ ಗ್ರಾಮಸ್ಥರು – Vishwanews24
