ಪಡುಬಿದ್ರಿ ಟೋಲ್ ಗೇಟ್ ವಿರೋಧದ ಜನಾಂದೋಲನಕ್ಕೆ ಬೆಂಬಲ ಘೋಷಿಸಿದ ಮೂರು ಅಂತರಾಷ್ಟ್ರೀಯ ಸಂಸ್ಥೆಗಳು : ಜೆಸಿ,ಲಯನ್ಸ್,ರೋಟರಿ : vishwanews24
ಪಡುಬಿದ್ರಿ ಟೋಲ್ ಗೇಟ್ ವಿರೋಧದ ಜನಾಂದೋಲನಕ್ಕೆ ಬೆಂಬಲ ಘೋಷಿಸಿದ ಮೂರು ಅಂತರಾಷ್ಟ್ರೀಯ ಸಂಸ್ಥೆಗಳು : ಜೆಸಿ,ಲಯನ್ಸ್,ರೋಟರಿ
ರಾಜ್ಯ ಹೆದ್ದಾರಿಯ ಕಂಚಿನಡ್ಕ ಬಳಿ ರಾಜ್ಯ ಸರಕಾರ ನಿರ್ಮಿಸಲು ನಿರ್ಧರಿಸಿರುವ ಟೋಲ್ ನಿರ್ಮಾಣಕ್ಕೆ ಪಡುಬಿದ್ರಿ ಜೇಸಿಐ, ಲಯನ್ಸ್ ಮತ್ತು ರೋಟರಿ ಅಂತಾರಾಷ್ಟ್ರೀಯ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿದ್ದು, ಆ.24ರಂದು ನಡೆ ಯುವ ಜನಾಂದೋಲನಕ್ಕೆ ಬೆಂಬಲ ವ್ಯಕ್ತ ಪಡಿಸಿವೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಜೇಸಿಐ ಪಡುಬಿದ್ರಿ, ಲಯನ್ಸ್ ಕ್ಲಬ್ ಪಡುಬಿದ್ರಿ, ರೋಟರಿ ಕ್ಲಬ್ ಪಡುಬಿದ್ರಿ ಮತ್ತು ಸ್ಪೂರ್ತಿ ಲಯನ್ಸ್ ಕ್ಲಬ್ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿ ಮಾಹಿತಿ ನೀಡಿ ದರು.
ಪಡುಬಿದ್ರಿ ಹಾಗೂ ಸುತ್ತಲಿನ ಎಲ್ಲ ನಮ್ಮ ಸಹ ಸಂಸ್ಥೆಗಳೂ ಹೋರಾಟಕ್ಕೆ ಬೆಂಬಲ ನೀಡಿವೆ ಎಂದು ಪ್ರಮುಖರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಸಂಪತ್ ಪಡುಬಿದ್ರಿ, ಜೇಸಿಐ ಅಧ್ಯಕ್ಷ ಸಂಜೀತ್ ಎರ್ಮಾಳ್, ರೋಟರಿ ಅಧ್ಯಕ್ಷೆ ತಸೀನ್ ಆರಾ, ಸ್ಫೂರ್ತಿ ಲಯನ್ಸ್ ಅಧ್ಯಕ್ಷೆ ಸ್ನೇಹಾ ಪ್ರವೀಣ್, ಪದಾಧಿಕಾರಿಗಳಾದ ವೈ. ಸುಕುಮಾರ್, ಮಿಥುನ್ ಆರ್. ಹೆಗ್ಡೆ, ಡಾ.ಎನ್.ಟಿ. ಅಂಚನ್, ಪ್ರಗತ್ ಜಿ. ಶೆಟ್ಟಿ, ಕಪಿಲ್ ಪಡುಬಿದ್ರಿ, ಕಸ್ತೂರಿ ಪ್ರವೀಣ್ ಉಪಸ್ಥಿತರಿದ್ದರು.
