ಪಡುಬಿದ್ರಿ : ಪ್ರೀತಿಸಿ ಮದುವೆಯಾದ ದಂಪತಿ ನಾಪತ್ತೆ : ಪ್ರಕರಣ ದಾಖಲು

Featured, ಉಡುಪಿ

ಪಡುಬಿದ್ರಿ : ಪ್ರೀತಿಸಿ ಮದುವೆಯಾದ ದಂಪತಿ ನಾಪತ್ತೆ : ಪ್ರಕರಣ ದಾಖಲು

ಪಡುಬಿದ್ರಿ : ಸುಮಾರು ಎರಡೂವರೆ ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ದಂಪತಿಗಳು ನಾಪತ್ತೆಯಾಗಿರುವ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆ. 1ರಂದು ಶಿಫಾಶೇಖ್‌ (25) ಹಾಗೂ ರಿಯಾಜ್‌ (28) ನಂದಿಕೂರು-ಅಡ್ವೆಯ ಮನೆಯಿಂದ ಉಡುಪಿಗೆ ಮೊಬೈಲ್‌ ಖರೀದಿಸಿ ಬರುವುದಾಗಿ ಹೇಳಿ ಹೋದವರು ಮರಳಿ ಬಾರದೆ ನಾಪತ್ತೆಯಾಗಿದ್ದಾರೆ.

ಇನ್ನು ರಿಯಾಜ್‌ ಮಣಿಪಾಲದ ಮೊಬೈಲ್‌ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದರು. ಶಿಫಾ ಶೇಖ್‌ ತಂದೆ-ತಾಯಿ ಮದುವೆಗೆ ಮುಂಚೆ ತೀರಿಕೊಂಡಿದ್ದು, ಆ ವೇಳೆ ಬಿಎಎಂಎಸ್‌ ಕಡೆಯ ವರ್ಷದಲ್ಲಿ ಕಲಿಯುತ್ತಿದ್ದ ಈಕೆಯು ವಿದ್ಯಾಭ್ಯಾಸ ಮೊಟಕುಗೊಳಿಸಿ ರಿಯಾಜ್‌ ಅವರನ್ನು ವಿವಾಹವಾಗಿದ್ದರು.

ಇದನ್ನೂ ಓದಿ : ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ಮತ್ತಿಬ್ಬರು ಆರೋಪಿಗಳ ಬಂಧನ – Vishwanews24 

ಇನ್ನು ಇತ್ತೀಚೆಗಷ್ಟೇ ಶಿವಮೊಗ್ಗಕ್ಕೆ ಸಂಬಂಧಿಕರ ಮನೆಗೆ ಹೋಗಿದ್ದಾಗ ಎರಡೂವರೆ ತಿಂಗಳ ಅವರ ಮಗುವೂ ತೀರಿಕೊಂಡಿತ್ತು ಎಂದು ತಿಳಿದು ಬಂದಿದೆ.

ರಿಯಾಜ್‌ ಮೊಬೈಲ್‌ ಸ್ವಿಚ್‌ ಆಫ್‌ ಆಗಿದ್ದು, ಶಿಫಾ ಮೊಬೈಲ್ ಮನೆಯಲ್ಲೇ ಇದೆ ಪೊಲೀಸರು ತಿಳಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

Leave a Reply