ಪಡುಬಿದ್ರಿ ಬೀಚ್ ನಲ್ಲಿ ಮತ್ತೆ ಕಡಲ್ಕೊರೆತ ಭೀತಿ – Vishwanews24

Featured, ಉಡುಪಿ

ಪಡುಬಿದ್ರಿ ಬೀಚ್ ನಲ್ಲಿ ಮತ್ತೆ ಕಡಲ್ಕೊರೆತ ಭೀತಿ

ಉಡುಪಿ: ಉಡುಪಿಯಲ್ಲಿ ಮಳೆಯ ಅಬ್ಬರ ಮತ್ತೆ ಮುಂದುವರೆದಿದ್ದು, ಜು.21ರ ಬೆಳಗ್ಗಿನಿಂದಲೇ ಭಾರೀ ಮಳೆ ಸುರಿಯಲು ಆರಂಭಿಸಿದೆ.

ರಾತ್ರಿಯ ವೇಳೆ ಮಳೆ ಮತ್ತಷ್ಟು ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಜಿಲ್ಲೆಯ ಕಾಪು, ಕುಂದಾಪುರ, ಕಾರ್ಕಳ ಸೇರಿದಂತೆ ಇತರ ಭಾಗದಲ್ಲೂ ಮಳೆ ಸುರಿತಾ ಇರುವ ಬಗ್ಗೆ ಮಾಹಿತಿ ಇದೆ.

ನಂದಿನಿ ಹಾಲು ದರ 3 ರೂಪಾಯಿ ಏರಿಕೆ; ಆಗಸ್ಟ್‌ 1 ರಿಂದಲೇ ಹೊಸ ದರ ಜಾರಿ – Vishwanews24

ಜಿಲ್ಲೆಯ ಮೀನುಗಾರರು ಮೀನುಗಾರಿಕೆ ತೆರಳಾಗದೇ ದಡದಲ್ಲೇ ನಾಡದೋಣಿಗಳನ್ನು ಲಂಗರು ಹಾಕಿದ ದೃಶ್ಯಗಳು ಕಂಡು ಬಂದಿವೆ.

ಇನ್ನು ಇತ್ತ ಕಡಲ ತಡಿಯಲ್ಲಿ ಕಡಲ್ಕೊರೆತದ ಭೀತಿ ಎದುರಾಗಿದ್ದು, ಪಡುಬಿದ್ರಿಯ ಕಡಲತಡಿಯಲ್ಲಿ ಮತ್ತೆ ಕಡಲ್ಕೊರೆತ ಉಂಟಾಗುವ ಸಾಧ್ಯತೆ ಇದೆ.

ಬೀಚ್‌ನಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳಾದ ರಂಗವೇದಿಕೆ, ಇಂಟರ್ಲಾಕ್, ಟೈಲ್ಸ್ ಗಳು, ಶೌಚಾಲಯಗಳು ಸಮುದ್ರ ಪಾಲಾಗುವ ಭೀತಿ ಎದುರಾಗಿದೆ.

ಇತ್ತೀಚೆಗಷ್ಟೇ ಸಂಭವಿಸಿದ ಕಡಲ್ಕೊರೆತದಿಂದ ಇಲ್ಲಿನ ಕಡಲ ತೀರದ ಅನೇಕ ಪ್ರದೇಶಗಳಲ್ಲಿ ಸಾಕಷ್ಟು ಅನಾಹುತ ಸಂಭವಿಸಿತ್ತು.

ಈಗ ಪಡುಬಿದ್ರೆ ಬೀಚ್ ನಲ್ಲಿ ಮತ್ತೆ ಕಡಲ್ಕೊರೆತ ಉಂಟಾಗಿದೆ.

ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಜಗಳ: ಬಸ್‌ ಚಾಲಕ, ನಿರ್ವಾಹಕರು ಪೊಲೀಸ್‌ ವಶಕ್ಕೆ – Vishwanews24

ಈ ಬಗ್ಗೆ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು ಸೂಕ್ತ ಕ್ರಮ ಕೈಗೊಂಡು ಶಾಶ್ವತ ಪರಿಹಾರವನ್ನು ಕಲ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Leave a Reply