ಪಡುಬಿದ್ರಿ: ಬೈಕ್‌ ಮತ್ತು ಬಸ್‌ ನಡುವೆ ಅಪಘಾತ – ಸವಾರ ಮೃತ್ಯು – Vishwanews24

Featured, ಉಡುಪಿ

ಪಡುಬಿದ್ರಿ: ಬೈಕ್‌ ಮತ್ತು ಬಸ್‌ ನಡುವೆ ಅಪಘಾತ – ಸವಾರ ಮೃತ್ಯು

ಪಡುಬಿದ್ರಿ: ಬೈಕ್‌ ಮತ್ತು ಬಸ್‌ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ‌ ವಾಹನ ಸವಾರ ಸಾವನ್ನಪ್ಪಿರುವ ಘಟನೆ ನಂದಿಕೂರು ಮುದರಂಗಡಿ ಜಂಕ್ಷನ್ ನಲ್ಲಿ ಇಂದು ಮುಂಜಾನೆ ನಡೆದಿದೆ.

ಕಾರ್ಕಳ ಅಜೆಕಾರು ನಿವಾಸಿ ಅಶ್ವಿತ್ ಶೆಟ್ಟಿ(24) ಮೃತ ಯುವಕ.

ಅಶ್ವಿತ್ ಶೆಟ್ಟಿ ಅವರು ಯೂಟ್ಯೂಬ್ ವ್ಲಾಗರ್ ಹಾಗೂ ಅಜೆಕಾರಿನ ಟೆಂಪೋ ಚಾಲಕ ಮಾಲಕರೂ ಆಗಿದ್ದರು ಎನ್ನಲಾಗಿದೆ.

ಇನ್ನು ಹವ್ಯಾಸಿ ಬೈಕ್ ಸವಾರರಾಗಿದ್ದ ಅಶ್ವಿತ್ ಅವರು ತಿಂಗಳ ಹಿಂದಷ್ಟೇ ಬೈಕಲ್ಲಿಯೇ ಜಮ್ಮು ಕಾಶ್ಮೀರದ ಲಡಾಖ್ ಗೂ ಹೋಗಿ ಬಂದಿದ್ದರು. ಇಂದು ಅಜೆಕಾರಿನಿಂದ ಬೈಕ್ ಸರ್ವೀಸ್ ಗೆ ಹೋಗುತ್ತಿದ್ದರು ಎನ್ನಲಾಗಿದೆ.

ಅವಿವಾಹಿತರಾಗಿದ್ದ ಮೃತ ಅಶ್ವಿತ್ ತನ್ನ ತಾಯಿ, ಅಣ್ಣ ಹಾಗೂ ಅಕ್ಕನನ್ನು ಅಗಲಿದ್ದಾರೆ.

Leave a Reply