ಪಡುಬಿದ್ರಿ ಭಾರಿ ಮಳೆಗೆ ಕೊಚ್ಚಿ ಹೋದ ಬಾಲಕಿ,ಒರ್ವಳ ರಕ್ಷಣೆ, ಪತ್ತೆ ಕಾರ್ಯ ಪ್ರಗತಿ
ಕಾಪು: ವಿದ್ಯಾರ್ಥಿಗಳು ನೀರು ಪಾಲು. ಓರ್ವಳ ರಕ್ಷಣೆ. ಮತ್ತೊಬ್ಬಳು ನಾಪತ್ತೆ.
ಪಡುಬಿದ್ರಿ ಠಾಣಾ ವ್ಯಾಪ್ತಿ ಪಾದೆಬೆಟ್ಟು ಪಟ್ಲ ಎಂಬಲ್ಲಿ ನಡೆದ ಘಟನೆ..
ಪಡುಬಿದ್ರಿ ಗಣಪತಿ ಶಾಲೆಯ ನಾಲ್ಕನೆಯ ತರಗತಿ ವಿದ್ಯಾರ್ಥಿನಿ ನಿಧಿ ತನ್ನ ಅಕ್ಕ ನಿಶಾ ಜೊತೆ ಪಟ್ಲ ಕಿರುಸೇತುವೆ ದಾಟುತ್ತಿದ್ದ ವೇಳೆ ನೀರು ಸೇತುವೆ ಮೇಲೆ ಹರಿಯುವ ರಭಸಕ್ಕೆ ನೀರು ಪಾಲಾಗಿದ್ದಾರೆ. ನಿಶಾಳನ್ನು ಸ್ಥಳೀಯರು ರಕ್ಷಿಸಿದ್ದಾರೆ. ನೀರು ಪಾರಾದ ನಿಧಿ ಪತ್ತೆಯಾಗಿಲ್ಲ. ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪತ್ತೆ ಕಾರ್ಯ ಪ್ರಗತಿಯಲ್ಲಿದೆ.
