ಪಡುಬಿದ್ರಿ : ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವ್ಯಕ್ತಿ ನಾಪತ್ತೆ – vishwanews24
ಪಡುಬಿದ್ರಿ : ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವ್ಯಕ್ತಿ ನಾಪತ್ತೆ
ಪಡುಬಿದ್ರಿ: ಅದಮಾರು ಅಂಬೇಡ್ಕರ್ ನಗರ ದರ್ಕಾಸ್ತು ನಿವಾಸಿ, ಬಿ. ಕೃಷ್ಣಪ್ಪ (65) ಎಂಬವರು ಡಿ. 21ರಂದು ಬೆಳಿಗ್ಗೆ ಮನೆಯಿಂದ ಬೀಡಿ ತೆಗೆದುಕೊಂಡು ಬರುವುದಾಗಿ ಹೇಳಿ ಹೋದವರು ಮನೆಗೆ ಹಿಂದಿರುಗಿ ಬಾರದೇ ನಾಪತ್ತೆಯಾಗಿದ್ದಾರೆ.
ಇವರು ಕಳೆದ 20ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು ಈಚೆಗೆ ನೆನೆಪಿನ ಶಕ್ತಿಯನ್ನೂ ಕಳೆದುಕೊಂಡಿರುತ್ತಾರೆ. ಗ್ರಾಮದಲ್ಲಿ, ನೆರೆಹೊರೆಯವರಲ್ಲಿ ಹಾಗೂ ಸಂಬಂಧಿಕರಲ್ಲಿ ಮಕ್ಕಳು ವಿಚಾರಿಸಿ ಎಲ್ಲೂ ಕಾಣದಿರುವುದರಿಂದ ಪಡುಬಿದ್ರಿ ಪೊಲೀಸ್ ಠಾಣೆಗೆ ತೆರಳಿ ಈ ಕುರಿತಾದ ದೂರನ್ನು ನೀಡಲಾಗಿದೆ.
ಇವರ ಕುರಿತಾಗಿ ಯಾರಿಗಾದರೂ ತಿಳಿದುಬಂದಲ್ಲಿ ಪಡುಬಿದ್ರಿ ಪೊಲೀಸ್ ಠಾಣಾಧಿಕಾರಿ (9480805450) ಅಥವಾ ಠಾಣೆಯನ್ನು ಸಂಪರ್ಕಿಸಬಹುದಾಗಿದೆ.
