ಪಡುಬಿದ್ರಿ: ಮಾನಸಿಕ ಖಿನ್ನತೆ- ಯುವಕ ನೇಣು ಬಿಗಿದು ಆತ್ಮಹತ್ಯೆ  – vishwanews24

Featured, ಉಡುಪಿ

ಪಡುಬಿದ್ರಿ: ಮಾನಸಿಕ ಖಿನ್ನತೆ- ಯುವಕ ನೇಣು ಬಿಗಿದು ಆತ್ಮಹತ್ಯೆ

ಪಡುಬಿದ್ರಿ: ಯಾವುದೋ ಕಾರಣದಿಂದ ಮನನೊಂದು ಕಂಚಿನಡ್ಕ ಪೊಲೀಸ್‌ ಕ್ವಾರ್ಟರ್ ಬಳಿಯ ಸುಶಾಂತ್‌ (22) ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಮೃತ ಸುಶಾಂತ್‌ ತಂದೆ, ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ.

ಖಾಸಗಿ ಸಂಸ್ಥೆಯೊಂದರಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಮಂಗಳವಾರ ಮಧ್ಯರಾತ್ರಿ 1.10ರ ಹೊತ್ತಿಗೆ “ಗುಡ್‌ಬೈ ಗೈಸ್‌’ ಎಂದು ಸ್ಟೇಟಸ್‌ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply