ಪಡುಬಿದ್ರಿ: ರಾಜಕೀಯ ಧುರೀಣ, ಸಮಾಜಸೇವಕ ಪಿ.ಉಮರ್ ಫಾರೂಖ್ ವಿಧಿವಶ – Vishwanews24

Featured, ಉಡುಪಿ

ಪಡುಬಿದ್ರಿ: ರಾಜಕೀಯ ಧುರೀಣ, ಸಮಾಜಸೇವಕ ಪಿ.ಉಮರ್ ಫಾರೂಖ್ ವಿಧಿವಶ

ಪಡುಬಿದ್ರಿ : ಇಲ್ಲಿನ ರಾಜಕೀಯ ಧುರೀಣ, ಸಮಾಜಸೇವಕ ಎಸ್.ಪಿ ಉಮರ್ ಫಾರೂಖ್ ಅವರು ಅನಾರೋಗ್ಯದಿಂದ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

ಕಂಚಿನಡ್ಕ ಎಸ್.ಪಿ. ಕಂಪೌಂಡ್ ನಿವಾಸಿಯಾಗಿರುವ 60 ವರ್ಷದ ಹಾಜಿ ಎಸ್.ಪಿ. ಉಮರ್ ಫಾರೂಖ್ ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ.

ಮೃತರು ಪತ್ನಿ, ಮೂರು ಹೆಣ್ಣು, ಒಂದು ಗಂಡು ಮಕ್ಕಳನ್ನು ಅಗಲಿದ್ದಾರೆ. ಇಂದು ಮದ್ಯಾಹ್ನ ಪಡುಬಿದ್ರಿ ಜುಮ್ಮಾ ಮಸೀದಿಯಲ್ಲಿ ಇವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ: ದುಡುಕದೆ ನಿರ್ಣಯವನ್ನು ತೆಗೆದುಕೊಳ್ಳಿ..ನೋಡಿ ಇಂದಿನ ದಿನ ಭವಿಷ್ಯ.. ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ಧಾರ್ಮಿಕ, ಸಾಂಸ್ಕøತಿಕ, ಶೈಕ್ಷಣಿಕ ಸಂಘಟನೆಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದ ಉಮರ್ ಫಾರೂಖ್ ಅವರು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾಗಿ, ಪಡುಬಿದ್ರಿ ಗ್ರಾಮ ಪಂಚಾಯತಿ ಮಾಜಿ ಸದಸ್ಯರಾಗಿ, ಉಡುಪಿ ಜಿಲ್ಲಾ ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ ನ ಜಿಲ್ಲಾಧ್ಯಕ್ಷರಾಗಿ ಹಾಗೂ ಎಸ್.ವೈ.ಎಸ್ ಪಡುಬಿದ್ರಿ ಘಟಕದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಇದರ ಜೊತೆಗೆ ಪಡುಬಿದ್ರಿ ಜುಮ್ಮಾ ಮಸೀದಿ ಸದಸ್ಯರಾಗಿದ್ದ ಇವರು, ಜನತಾದಳದಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಇತ್ತೀಚೆಗೆ ಕಾಂಗ್ರೆಸ್‍ಗೆ ಸೇರ್ಪಡೆಗೊಂಡಿದ್ದರು.

ಇದನ್ನೂ ಓದಿ: ನವರಾತ್ರಿ ಸಂಭ್ರಮ – ಕಟೀಲಿನಲ್ಲಿ ಸೆ.26ರಿಂದ ಬದಲಿ ರಸ್ತೆ ಸಂಚಾರ ; ತಾತ್ಕಾಲಿಕ ಮಾರ್ಪಾಡು : ಎನ್‌ ಶಶಿಕುಮಾರ್ – Vishwanews24

Leave a Reply