ಪಡುಬಿದ್ರಿ : ಹೆಚ್ಚುತ್ತಿರುವ ಕಡಲ್ಕೊರೆತ – vishwanews24
ಪಡುಬಿದ್ರಿ : ಹೆಚ್ಚುತ್ತಿರುವ ಕಡಲ್ಕೊರೆತ
ಪಡುಬಿದ್ರಿ : ನಡಿಪಟ್ಟದಲ್ಲಿ ಕಡಲ್ಕೊರೆತ, ಅಪಾಯದಂಚಿನಲ್ಲಿ ಮೀನುಗಾರಿಕಾ ಶೆಡ್
ಪಡುಬಿದ್ರಿ : ಇಲ್ಲಿನ ಕಡಲ ತೀರದ ನಡಿಪಟ್ಟದಲ್ಲಿ ಕಡಲ್ಕೊರೆತ ಉಂಟಾಗಿದ್ದು, ಇದರ ಪರಿಣಾಮವಾಗಿ ಪಡುಬಿದ್ರಿಯ ಸುಮಾರು 50 ಕುಟುಂಬದ ಜೀವನವನ್ನು ಅವಲಂಬಿಸಿರುವ ನಾಡದೋಣಿ ಮಹೇಶ್ವರಿ ಡಿಸ್ಕೊ ಫಂಡ್ ನ ಮೀನುಗಾರಿಕೆಯ ಶೆಡ್ ಅಪಾಯದಂಚಿನಲ್ಲಿದೆ.
ಕಡಲ ಕೊರೆತಕ್ಕೆ ಹಾಕಿರುವ ಕಲ್ಲುಗಳು ಸಮುದ್ರ ಪಾಲಾಗುತ್ತಿದ್ದು ಇನ್ನಷ್ಟು ಅಪಾಯವನ್ನು ತಂದೊಡ್ಡುತ್ತಿದ್ದು, ತೀರ ವಾಸಿಗಳು ಆತಂಕದಲ್ಲಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಆದಷ್ಟು ಬೇಗ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಸುರತ್ಕಲ್ : ಬೃಹತ್ ಮಾರುಕಟ್ಟೆ ಕಾಮಗಾರಿ ಪುನರಾರಂಭ : ಶಾಸಕ ಡಾ. ಭರತ್ ಶೆಟ್ಟಿ – vishwanews24
