ಪಡುಬಿದ್ರಿ: ಹೆಜಮಾಡಿ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ ; ಟೋಲ್ ಗೇಟನ್ನು ತಕ್ಷಣ ತೆರವುಗೊಳಿಸಬೇಕೆಂದು ಆಗ್ರಹ – vishwanews24

Featured, ಉಡುಪಿ

ಪಡುಬಿದ್ರಿ: ಹೆಜಮಾಡಿ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ ..

ಟೋಲ್ ಗೇಟ ನ್ನು ತಕ್ಷಣ ತೆರವುಗೊಳಿಸಬೇಕು ಎಂದು ಆಗ್ರಹ

15 ದಿನಗಳೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಇನ್ನಷ್ಟು ತೀವ್ರ ಹೋರಾಟ : ವಿನಯಕುಮಾರ್ ಸೊರಕೆ ಎಚ್ಚರಿಕೆ

ಪಡುಬಿದ್ರಿ: ಪಡುಬಿದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಹನಗಳಿಗೆ ಟೋಲ್ ವಿನಾಯಿತಿ ನೀಡಬೇಕು ಹಾಗೂ ಹೆಜಮಾಡಿ ಹಳೆ ರಾ.ಹೆ-66 ರಲ್ಲಿರುವ ಟೋಲ್ ಗೇಟ ನ್ನು ತಕ್ಷಣ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಶನಿವಾರ ಮಾಜಿ ಸಚಿವ ವಿನಯಕುಮಾರ್ ಸೊರಕೆ ನೇತೃತ್ವದಲ್ಲಿ ಪಡುಬಿದ್ರಿ ಮತ್ತು ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಆಶ್ರಯದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಟೋಲ್‌ಗೇಟ್ ಮುಂಭಾಗ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಟೋಲ್ ವಿರುದ್ಧ ಘೋಷಣೆ ಕೂಗಿ, ಟೋಲ್‌‌ ಪ್ಲಾಝಾಗೆ ಮುತ್ತಿಗೆ ಹಾಕಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು. ಟೋಲ್ ಅಧಿಕಾರಿಗಳನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ :

ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆ: ಹಿಜಾಬ್ ಧರಿಸಲು ಅವಕಾಶ ಇಲ್ಲ : ಧಾರ್ಮಿಕ ಉಡುಪುಗಳ ಗೊಂದಲ ಬಗ್ಗೆ ಪ್ರಿಯಾಂಕ ಖರ್ಗೆ ಸ್ಪಷ್ಟನೆ – vishwanews24

ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, 15 ದಿನಗಳೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಇನ್ನಷ್ಟು ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ತಹಶೀಲ್ದಾರ್ ಅನಂತ ಶಂಕರ್ ಅವರು ಮನವಿ ಸ್ವೀಕರಿಸಿದರು.

ಈ ವೇಳೆ ಕಾಪು ಕ್ಷೇತ್ರ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಕಾರ್ಡಿನೇಟರ್ ನವೀನ್ ಚಂದ್ರ ಜೆ. ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಕೃಷ್ಣ ಶೆಟ್ಟಿ, ಗುಲಾಮ್ ಅಹಮದ್, ಅಬ್ದುಲ್ ಅಜೀಜ್ ಹೆಜಮಾಡಿ, ನವೀನ್ ಎನ್. ಶೆಟ್ಟಿ, ಅಶ್ವಿನ್ ಕೋಟ್ಯಾನ್, ಸುಧೀರ್ ಕರ್ಕೇರ, ಮಹಮ್ಮದ್ ನಿಜಾಮುದ್ದೀನ್, ಶಾಂತಾಲತಾ ಶೆಟ್ಟಿ, ಅಬ್ದುಲ್ ಅಜೀಜ್ ಹೆಜಮಾಡಿ, ಫರ್ಜಾನ, ಅಶ್ವಿನಿ ಬಂಗೇರ, ಜೀನರಾಜ್ ಬಂಗೇರ, ದಯಾನಂದ್ ಹೆಜಮಾಡಿ, ಮೋಹನ್ ದಾಸ್ ಹೆಜಮಾಡಿ, ಪ್ರಬೋಧ್ ಚಂದ್ರ ಹೆಜಮಾಡಿ, ವಿಶಾಲ್ ಬಂಗೇರ, ದೀಕ್ಷಾ ಕೆ., ರಮೀಜ್ ಹುಸೇನ್, ಹಾಜಿ ಶೇಕಬ್ಬ ಕೋಟೆ, ಪ್ರಜ್ವಲ್ ಸಾಲ್ಯಾನ್, ತಸೀನ್ನ ಅರಾ, ಕೀರ್ತಿ ಕುಮಾರ್, ಹಸನಬ್ಬ ಕೋಡಿ, ಜ್ಯೋತಿ ಮೆನನ್, ಸುಚರಿತಾ ಅಮೀನ್, ಮಹಮ್ಮದ್ ಶರೀಫ್, ವಿಠಲ್ ಮಾಸ್ಟರ್, ಸನಾ ಇಬ್ರಾಹಿಮ್, ಶಿವರಾಮ್ ಶೆಟ್ಟಿ, ಸೌಮ್ಯ ರಿತೇಶ್, ರೋಶಾನ್ ಕಾಂಚನ್, ಶಾಫಿ ಎಂ. ಎಸ್., ಸಯ್ಯದ್ ನಿಜಾಮುದ್ದೀನ್ ಉಪಸ್ಥಿತರಿದ್ದರು.

ಇದನ್ನೂ ಓದಿ :

ಕಡಬ: ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆ – vishwanews24

Leave a Reply