ಪಡುಬಿದ್ರಿ70 ನೇ ಅಖಿಲಭಾರತ ಸಹಕಾರ ಸಪ್ತಾಹ ಸಮಾರೋಪ : ವೈ ಸುಧೀರ್ ಕುಮಾರ್ :- vishwanews24
ಪಡುಬಿದ್ರಿ70 ನೇ ಅಖಿಲಭಾರತ ಸಹಕಾರ ಸಪ್ತಾಹ ಸಮಾರೋಪ : ವೈ ಸುಧೀರ್ ಕುಮಾರ್ :- vishwanews24
ನವಿಕೃತ ಹವಾ ನಿಯಂತ್ರಿತ ಸಭಾಂಗಣ ಉದ್ಘಾಟನೆ ಸನ್ಮಾನ ಕೃಷಿ ಸಹಾಯಧನ ವಿತರಣೆ
ಪಡುಬಿದ್ರಿ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ಬೆಂಗಳೂರು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ,ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಹಾಗೂ ಸಹಕಾರ ಇಲಾಖೆ ಉಡುಪಿ ಜಿಲ್ಲೆ ಇದರ ಸಯುಕ್ತ ಆಶಯದಲ್ಲಿ 70ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಹಾಗೂ ಸಹಕಾರ ಶಿಕ್ಷಣ ತರಬೇತಿಯ ಪರಿಷ್ಕರಣೆ ದಿನ, ಪಡುಬಿದ್ರಿ ಸೊಸೈಟಿಯ ನವಿಕೃತ ಹವಾ ನಿಯಂತ್ರಿತ ಸಭಾಂಗಣ ಉದ್ಘಾಟನೆ ಸನ್ಮಾನ ಕೃಷಿ ಸಹಾಯ ಧನ ವಿತರಣಾ ಸಮಾರಂಭ ವೈ ಲಕ್ಷ್ಮಣ ಸಭಾಂಗಣ ಸಹಕಾರ ಸಂಗಮ ಪಡುಬಿದ್ರಿ ಇಲ್ಲಿ ಸೋಮವಾರ ಪೂರ್ವಾಹ್ನ 10.30 ಕ್ಕೆ ಜರಗಲಿದೆ ಎಂದು ಪಡುಬಿದ್ರಿ ಸಹಕಾರಿ ವ್ಯವಸಾಯ ಕ ಸೊಸೈಟಿ ಅಧ್ಯಕ್ಷ ವೈ ಸುಧೀರ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಡಾ. ಎಂ ಎನ್ ರಾಜೇಂದ್ರ ಕುಮಾರ್ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ವೈ .ಸುಧಿರ್ ಕುಮಾರ್ ವಹಿಸಲಿದ್ದಾರೆ, ನವೀಕೃತ ಹವಾನಿಯಂತ್ರಿತ ಸಭಾಂಗಣದ ಉದ್ಘಾಟನೆಯನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಮಾಡಲಿದ್ದು ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ,ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಇಂದ್ರಾಳಿ ಜಯಕರ ಶೆಟ್ಟಿ, ಸಹಕಾರ ಸಂಘಗಳ ಉಪಬಂಧಕರ ರಮೇಶ್ ಹೆಚ್ ಏನ್ , ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್ ವಿ , ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷ ಶಶಿಕಲಾ ವೈ ಉಪಸ್ಥಿತರಿರುವರು, ಡಾ ಗಣನಾಥ ಎಕ್ಕಾರ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆಂದು ಅವರು ತಿಳಿಸಿದರು.
ಇದೇ ಸಂಧರ್ಭದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕಾಪು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ , ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಕಲಾ ವೈ,ಅವರಿಗೆ ಸನ್ಮಾನ ಕಾರ್ಯಕ್ರಮ, ಬಾಲಕೃಷ್ಣ ಭಟ್ ಅವರಿಗೆ ಬಿಳ್ಕೋಡುಗೆ ಕಾರ್ಯಕ್ರಮ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಸೊಸೈಟಿಯ ನಿರ್ದೇಶಕರುಗಳಾದ ಗಿರಿಶ್,ಶಿವರಾಮ್ ಶೆಟ್ಟಿ, ವಾಸುದೇವ ಪಲಿಮಾರು,ಮಾಧವ ಆಚಾರ್ಯ, ರಾಜರಾಮ್,ಯಶವಂತ್,ಸ್ಟ್ಯಾನಿ ಕಾಡ್ರಸ್, ಸುಚರಿತಾ ಅಮೀನ್, ದೀಪಕ್ ಸಾಲ್ಯಾನ್ ಉಪಸ್ಥಿತರಿದ್ದರು.
