ಪತ್ನಿ ಹಾಗೂ ತನ್ನಿಬ್ಬರು ಮಕ್ಕಳ ಸಹಿತ ಬಿಜೆಪಿ ಮಾಜಿ ಕೌನ್ಸಿಲರ್ ಆತ್ಮಹತ್ಯೆ – Vishwanews24

Featured, ರಾಷ್ಟ್ರ ನ್ಯೂಸ್

ಪತ್ನಿ, ತನ್ನಿಬ್ಬರು ಮಕ್ಕಳ ಸಹಿತ ಬಿಜೆಪಿ ಮಾಜಿ ಕೌನ್ಸಿಲರ್ ಆತ್ಮಹತ್ಯೆ

ವಿದಿಶಾ: ಬಿಜೆಪಿಯ ಮಾಜಿ ಕಾರ್ಪೋರೇಟರ್ ಓರ್ವರು ಪತ್ನಿ ಹಾಗೂ ತನ್ನಿಬ್ಬರು ಮಕ್ಕಳ ಸಹಿತ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ನಡೆದಿದೆ.

ಮೃತರನ್ನು ಸಂಜೀವ್ ಮಿಶ್ರಾ (45), ಅವರ ಪತ್ನಿ ನೀಲಂ ಮಿಶ್ರಾ,(೪೨) ಇಬ್ಬರು ಪುತ್ರರಾದ ಅನ್ಮೋಲ್ (13) ಮತ್ತು ಸಾರ್ಥಕ್ ಮಿಶ್ರಾ ( 7) ಎಂದು ಗುರುತಿಸಲಾಗಿದೆ.

ಸಂಜೀವ್ ಮಿಶ್ರಾ ಮಾಜಿ ಬಿಜೆಪಿ ಕಾರ್ಪೊರೇಟರ್ ಆಗಿದ್ದು, ಬ್ರಾಸ್ ಮಿಲ್ ಬಳಿ ‘ಜನತಾ ಭೋಜ್ನಾಲಯ’ ಎಂಬ ರೆಸ್ಟೋರೆಂಟ್ ನಡೆಸುತ್ತಿದ್ದರು. ಇಬ್ಬರು ಮಕ್ಕಳಲ್ಲಿ ಹಿರಿಯ ಪುತ್ರ ಅನ್ಮೋಲ್ ” ಮಸ್ಕ್ಯುಲರ್ ಡಿಸ್ಟ್ರೋಫಿ’ ಎಂಬ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದು, ತಂದೆಯಾಗಿ ಕಷ್ಟಪಟ್ಟು ಎಲ್ಲಾ ಚಿಕಿತ್ಸೆ ಕೊಡಿಸಿದರೂ ಕಾಯಿಲೆ ಕಾಡುತ್ತಿತ್ತು.

ವಿಕಲಚೇತನರಿಗೆ `ಆಧಾರ’ ಯೋಜನೆಯಡಿ 1 ಲಕ್ಷ ರೂ.ವರೆಗೆ ಸಾಲ ಸೌಲಭ್ಯ  – Vishwanews24

ಇದೇ ಕಾರಣದಿಂದ ಗುರುವಾರ ಸಂಜೆ ಸಾಮಾಜಿಕ ಜಾಲತಾಣದಲ್ಲಿ “ದೇವರು ಶತ್ರುವಿನ ಮಕ್ಕಳನ್ನೂ ಈ ಕಾಯಿಲೆಯಿಂದ ಪಾರು ಮಾಡಲಿ, ನಾನು ಇನ್ನು ಮಗುವನ್ನು ಉಳಿಸಲು ಆಗುವುದಿಲ್ಲ. ನಾನು ಜೀವಂತವಾಗಿ ಇರಲು ಸಾಧ್ಯವಿಲ್ಲ” ಎಂದು ಸಂಜೀವ್‌ ಪೋಸ್ಟ್‌ ಮಾಡಿದ್ದರು.. ಇದನ್ನು ಗಮನಿಸಿದ ಸ್ನೇಹಿತರು ಮನೆಗೆ ಬಂದು ಆಸ್ಪತ್ರೆಗೆ ದಾಖಲಿಸಿದ್ದು ಆದರೆ ನಾಲ್ವರೂ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಸ್ತೆ, ಆಸ್ಪತ್ರೆ, ಸಂಸ್ಥೆಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರಿಡಲು ತೀರ್ಮಾನ : ಸಿಎಂ ಬೊಮ್ಮಾಯಿ  – Vishwanews24

Leave a Reply