ಪನೀರ್‌ -ಚಿಕನ್‌ ಗ್ರೇವಿ ಮಸಾಲ ಮಾಡುವ ವಿಧಾನ – Vishwanews24

Featured, ವಿಶೇಷ ಲೇಖನಗಳು
ಪನೀರ್‌ ಮತ್ತು ಚಿಕನ್ ಇವೆರಡೂ ಎಲ್ಲಾ ಜನರ ಫೇವರಿಟ್‌ ತಿನಿಸುಗಳಲ್ಲಿ ಒಂದಾಗಿದೆ . ಬಾಯಲ್ಲಿ ನೀರೂರಿಸುವ ಪನೀರ್‌- ಚಿಕನ್‌ ಗ್ರೇವಿ ಮಸಾಲ ಟೇಸ್ಟ್‌ ಹೇಗಿದೆ ನೀವು ಸವಿದು ನೋಡಿ.
ಬೇಕಾಗುವ ಸಾಮಾಗ್ರಿಗಳು:
  • ಚಿಕನ್‌ 1/2 ಕೆಜಿ
  • ಪನ್ನೀರ್ 100 ಗ್ರಾಂ
  • ಟೊಮೇಟೊ ಪ್ಯೂರಿ 1/2ಕಪ್
  • ಸಣ್ಣದಾಗಿ ಕತ್ತರಿಸಿದ ಈರುಳ್ಳಿ 1/2 ಕಪ್
  • ಗರಂ ಮಸಾಲ 2 ಚಿಕ್ಕ ಚಮಚ
  • ಮೆಣಸಿನ ಪುಡಿ 1 ಚಮಚ
  • ಧನಿಯ ಪುಡಿ  1/2 ಚಮಚ
  • ಹಸಿಮೆಣಸು 7 ರಿಂದ 8
  • ಸಾಸಿವೆ 1/4 ಚಮಚ
  • ಎಣ್ಣೆ
  • ಲಿಂಬೆ ರಸ 2 ಚಮಚ
  • ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ:
  • ಮೊದಲಿಗೆ ಒಂದು ದಪ್ಪತಳದ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿಮಾಡಿ. ಇದರಲ್ಲಿ ಪನ್ನೀರ್ ತುಂಡುಗಳನ್ನು ಹಾಕಿ ಎಲ್ಲಾ ಬದಿಗಳು ಕಂದು ಬಣ್ಣ ಬರುವಷ್ಟು ಹುರಿದು ತೆಗೆದಿಡಿ.
  • ಈಗ ಅದೇ ಪಾತ್ರೆಯಲ್ಲಿ ಇನ್ನೂ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ ಹಾಕಿ.
  • ಸಾಸಿವೆ ಸಿಡಿದ ಬಳಿಕ ಈರುಳ್ಳಿ ಮತ್ತು ಹಸಿಮೆಣಸು ಹಾಕಿ ಹುರಿಯಿರಿ.
  • ಈಗ ಈ ಮಿಶ್ರಣಕ್ಕೆ ಟೊಮೇಟೋ ಪ್ಯೂರಿ, ಗರಂ ಮಸಾಲೆ ಪುಡಿ, ಮೆಣಸಿನ ಪುಡಿ, ಧನಿಯ ಪುಡಿ ಹಾಕಿ.
  • ಸ್ವಲ್ಪ ಹೊತ್ತಿನ ಬಳಿಕೆ ಪನ್ನೀರ್ ತುಂಡುಗಳನ್ನು ಸೇರಿಸಿ.
  • ನಂತರ ಸಣ್ಣದಾಗಿ ಕತ್ತರಿಸಿದ ಚಿಕನ್‌ ಪೀಸ್‌ ಸೇರಿಸಿ. ಅದರ ಮೇಲೆ ಉಪ್ಪು ನಿಂಬೆ ರಸ ಹಾಕಿ ಬೇಯಿಸಿ.
  • ಚಿಕನ್‌ ಸರಿಯಾಗಿ ಬೆಂದ ಮೇಲೆ ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ ಸರ್ವ್‌ ಮಾಡಬಹುದು.
  • ಈಗ ಟೇಸ್ಟಿಯಾದ ಪನೀರ್‌ ಚಿಕನ್‌ ಗ್ರೇವಿ ಸವಿಯಲು ರೆಡಿ. ಇದನ್ನು ನೀವು ಚಪಾತಿ ಅಥವಾ ಅನ್ನದ ಜೊತೆ ಸವಿಯಬಹುದು.