ಪರಿಸರ ಸ್ನೇಹಿ ಮಣ್ಣಿನ ಗಣೇಶನ ಮೂರ್ತಿಗಳನ್ನ ಮಾತ್ರ ಬಳಸಿ : ಸುದೀಪ್ ಮನವಿ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು :ಪ್ರಾಕೃತಿಕ ವಿಕೋಪಗಳ ಉದಾಹರಣೆ ನೀಡುವ ಮೂಲಕ ಪರಿಸರ ಸ್ನೇಹಿ ಮಣ್ಣಿನ ಗಣೇಶನನ್ನೇ ಕೂರಿಸಿ ಎಂದು ಸುದೀಪ್ ಮನವಿ ಮಾಡಿದ್ದಾರೆ. ಪಿಒಪಿ ಗಣೇಶ ಬೇಡ, ಮಣ್ಣಿನ ಗಣಪನನ್ನು ಪೂಜಿಸಿ ಪ್ರಕೃತಿಯನ್ನು ಕಾಪಾಡೋಣ ಎಂದು ನಟ ಕಿಚ್ಚ ಸುದೀಪ ಕರೆ ನೀಡಿದ್ದಾರೆ.

ನಟ ಕಿಚ್ಚ ಸುದೀಪ್ ಕೂಡ ಪಿಓಪಿ ಗಣೇಶ ಬೇಡ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ”ನಾವು ನಮ್ಮ ಪ್ರಕೃತಿಗೆ ಕೊಡುವ ನೋವನ್ನು ಪ್ರಕೃತಿಯು ತಿರುಗಿಸಿ ವಾಪಸ್ ಕೊಡುತ್ತಿರುವುದನ್ನು ನಾವು ಆನುಭವಿಸಿದ್ದೇವೆ. ಹಾಗಾಗಿ ಈ ಸಲ ನಮ್ಮ ವಿಘ್ನ ನಿವಾರಕನ ಹಬ್ಬಕ್ಕೆ, ಪಿಓಪಿ ಗಣೇಶನ ಮೂರ್ತಿಗಳನ್ನ ಉಪಯೋಗಿಸದೆ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನ ಮಾತ್ರ ಬಳಸಿ, ಪ್ರಕೃತಿ ಮಾತೆಯನ್ನ ಕಾಪಾಡೋಣ. ಇದು ನನ್ನ ನಿಮ್ಮ ನಮ್ಮೆಲ್ಲರ ಜವಾಬ್ದಾರಿ” ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ.

ಪ್ರಾಕೃತಿಕ ವಿಕೋಪಗಳ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸುದ್ದಿಯನ್ನು ಶೇರ್ ಮಾಡುವ ನೀಡುವ ಮೂಲಕ ಪರಿಸರ ಸ್ನೇಹಿ ಮಣ್ಣಿನ ಗಣೇಶನನ್ನೇ ಕೂರಿಸಿ ಎಂದು ಸುದೀಪ್ ಮನವಿ ಮಾಡಿದ್ದಾರೆ.