ಪಾಂಗಳದಲ್ಲಿ ಕಾರು ಪಲ್ಟಿ ದಂಪತಿಗಳಿಗೆ ಗಾಯ –
ಪಾಂಗಳದಲ್ಲಿ ಕಾರು ಪಲ್ಟಿ ದಂಪತಿಗಳಿಗೆ ಗಾಯ .
ಪಾಂಗಾಳ : ಕಾರು ಪಲ್ಟಿ ; ದಂಪತಿಗೆ ಗಾಯ
ಕಾಪು, ಡಿ. 31 : ರಾಷ್ಟ್ರೀಯ ಹೆದ್ದಾರಿ66 ರ ಪಾಂಗಾಳದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಪಲ್ಟಿಯಾಗಿ ಕಂದಕಕ್ಕೆ ಬಿದ್ದ ಘಟನೆ ಗುರುವಾರ ರಾತ್ರಿ ನಡೆದಿದೆ.
ಅಪಘಾತದಲ್ಲಿ ಕಟಪಾಡಿ ಮಟ್ಟು ನಿವಾಸಿಗಳಾದ ಲಕ್ಷ್ಮೀ ನಾರಾಯಣ ರಾವ್ ಮತ್ತು ಶಾಲಿನಿ ರಾವ್ ಗಾಯಾಳುಗೊಂಡಿದ್ದಾರೆ.
ಅಪಘಾತಕ್ಕೆ ಸಿಲುಕಿ ಕಾರಿನೊಳಗೆ ಸಿಲುಕಿದ್ದ ಗಾಯಾಳುಗಳನ್ನು ಇನ್ನಂಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ನಾಗೇಶ್ ಭಂಡಾರಿ ಮತ್ತು ಅವರ ಸ್ನೇಹಿತರು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.



