ಪಾಂಗಾಳ ಆರ್ಯಾಡಿ ಗಿರಿಜಾ ಪೂಜಾರ್ತಿ ಕುಟುಂಬದ ಸಂಕಷ್ಟಕ್ಕೆ ಮಿಡಿದ ಪಾಂಗಾಳ ಗೋವಿಂದ ಶೆಟ್ಟಿ- vishwanews24

Featured, ಉಡುಪಿ

ಪಾಂಗಾಳ ಆರ್ಯಾಡಿ ಗಿರಿಜಾ ಪೂಜಾರ್ತಿ ಕುಟುಂಬದ ಸಂಕಷ್ಟಕ್ಕೆ ಮಿಡಿದ ಪಾಂಗಾಳ ಗೋವಿಂದ ಶೆಟ್ಟಿ- vishwanews24

ಕಾಪು: ಪಾಂಗಾಳ ಆರ್ಯಾಡಿ ನಿವಾಸಿಗಳಾದ ಗಂಗೆ ಪೂಜಾರ್ತಿ ಮತ್ತು ಗಿರಿಜಾ ಪೂಜಾರ್ತಿ ಮನೆ ತೀವ್ರ ದುಸ್ಥಿತಿಯಲ್ಲಿದೆ. ಕಳೆದ ಸೆಪ್ಟೆಂಬರ್ ನಲ್ಲಿ ಮಳೆಗೆ ಬಿದ್ದ ಈ ಮನೆಗೆ ಯಾವುದೇ ರೀತಿಯ ಸೌಲಭ್ಯ ದೊರಕಲಿಲ್ಲ ಎಂಬ ಊಹಾಪೋಹದ ಸುದ್ದಿಗೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ವಾರ್ ನಡೆಸಿದ ವ್ಯಕ್ತಿಗಳಿಗೆ ಸಮಾಜಸೇವಕ ಪಾಂಗಾಳ ಗೋವಿಂದ ಶೆಟ್ಟಿ ಆ ಕುಟುಂಬದ ವಿಚಾರವಾಗಿ ತುರ್ತಾಗಿ ಸ್ಪಂದಿಸುವ ಮೂಲಕ‌ ಎಲ್ಲಾ ಜಾತಿ ರಾಜಕೀಯ ದೊಂಬರಾಟಕ್ಕೆ ತೆರೆಎಳೆದಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಗೋವಿಂದ ಶೆಟ್ಟರು ” ಪಾಂಗಾಳ ಆರ್ಯಾಡಿ ಈ ಭಾಗದಲ್ಲಿ ಜಾತಿ ಜಾತಿ ನಡುವಿನ ಕಚ್ಚಾಟವಿಲ್ಲ ಎಲ್ಲಾರೂ ಒಗ್ಗಟಾಗಿ ಒಂದೇ ತಾಯಿಯ ಮಕ್ಕಳಂತೆ ಜೀವಿಸುತ್ತಿದ್ದೇವೆ ಪ್ರಸ್ತುತ ಈ ಮೇಲೆ ಉಲ್ಲೇಖ ಮಾಡಿರುವ ಕುಟುಂಬದ ಆಂತರಿಕ ಸಮಸ್ಯೆಯಾಗಿದ್ದು ಅದನ್ನು ನಮ್ಮೂರಿನ ಯುವಕರೆ ಸ್ಪಂದಿಸುವ ಮುಖಾಂತರ ಮತ್ತು ಖುದ್ದಾಗಿ ಸ್ವತಃ ಖರ್ಚಿನಿಂದ ಆ ಮನೆಗೆ ವಿದ್ಯುತ್ ದೀಪ ಹಾಗೂ ಇತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕುರಿತಾಗಿ ಆ ಕುಟುಂಬದ ಸದಸ್ಯರ ಜತೆ ಆರ್ಯಾಡಿ ಧೂಮವತಿ ದೇವಸ್ಥಾನದಲ್ಲಿ ಶುಕ್ರವಾರ ಆ ಕುಟುಂಬದ ಸದಸ್ಯರನ್ನು ಕರೆದು ಮಾತಾಡಿಸಲಾಗಿದೆ ಈ ಬಗ್ಗೆ ಸಕಲ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ಹೇಳಿದರು, ಈ ನಡುವೆ ಹೊರಗಿನ ಊರಿನ ಸಮಾಜಸೇವೆ ಅನ್ನುವ ಹೆಸರಿನಲ್ಲಿ ಪಾಂಗಾಳ ಆರ್ಯಾಡಿಗೆ ಬಂದು ಜಾತಿರಾಜಕೀಯ ಹಾಗೂ ವ್ಯಕ್ತಿ ನಿಂದನೆ ಮಾಡಿದ್ದಲ್ಲಿ ಸಹಿಸುವುದಿಲ್ಲ ಮತ್ತು ಈ ಬಗ್ಗೆ ಕಾನೂನಿನ ಪ್ರಕ್ರಿಯೆಗೆ ಮುಂದಾಗುತ್ತೇವೆ ಎಂದರು.”
ಮಾತ್ರವಲ್ಲದೆ ಈ ಮೇಲಿನ ಕುಟುಂಬದ ಮನೆ ರಿಪೇರಿಯ ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳಿಗೆ ನಾವು ಸ್ಪಂದಿಸಿದ್ದು ತಾಂತ್ರಿಕ ಕಾರಣಗಳಿಂದ ತಡೆಯಾಗಿದೆ ಹಾಗಾಗಿ ಈ ವಿಚಾರವಾಗಿ ಸೋಶಿಯಲ್‌ ಮೀಡಿಯಾದಲ್ಲಿ ಅಲ್ಲಸಲ್ಲದ ಆರೋಪ ಹಾಗೂ ವ್ಯಕ್ತಿ ನಿಂದನೆ,ಜಾತಿ ನಿಂದನೆ ಮಾಡಬಾರದು ಇಲ್ಲಿ ನಾವೆಲ್ಲರೂ ಒಂದಾಗಿದ್ದೇವೆ ಎಂದು ಅವರು ತಿಳಿಸಿದರು.

ಬ್ಯೂರೋ ರಿಪೋರ್ಟ್: vishwanews24

        ‌ಬಡಕುಟುಂಬಕ್ಕೆ ಸ್ಪಂದಿಸಿದ ಗೋವಿಂದ ಶೆಟ್ಟಿ
            ಬಡ ಕುಟುಂಬದ ಸೂರು                                 FACEBOOK VIDEO LINK  https://www.facebook.com/VishwaNews24/videos/486583329432874/    https://www.facebook.com/VishwaNews24/videos/486583329432874/