ಪಾಂಗಾಳ ಶರತ್ ಶೆಟ್ಟಿ ಕೊಲೆ ಕೇಸ್‌ : ಕೊಲೆಗಾರರ ವಿರುದ್ಧ ಕ್ರಮಕ್ಕೆ ದೈವದ ಮೊರೆ ಹೋದ ಕುಟುಂಬ, ಕೊಲೆಗಾರರನ್ನು ಸರ್ವನಾಶ ಮಾಡುವುದಾಗಿ ದೈವ ಭರವಸೆ

Featured, ಉಡುಪಿ

ಶರತ್ ಶೆಟ್ಟಿ ಕೊಲೆ ಕೇಸ್‌ : ಕೊಲೆಗಾರರ ವಿರುದ್ಧ ಕ್ರಮಕ್ಕೆ ದೈವದ ಮೊರೆ ಹೋದ ಕುಟುಂಬ

ವರ್ತೆ ಪಂಜುರ್ಲಿ ದೈವದ ಕೋಲದಲ್ಲಿ ಅಳಲನ್ನು ತೋಡಿಕೊಂಡ ಕುಟುಂಬಸ್ಥರು..

ಕೊಲೆಗಾರರನ್ನು ಸರ್ವನಾಶ ಮಾಡುವುದಾಗಿ ದೈವ ಭರವಸೆ..

ಉಡುಪಿ : ಜಿಲ್ಲೆ ಕಾಪು ತಾಲೂಕಿನ ಪಾಂಗಾಳ ಗ್ರಾಮದಲ್ಲಿ ಶರತ್ ಶೆಟ್ಟಿ (42) ಕೊಲೆ ಪ್ರಕರಣ‌ ಸಂಬಂಧಿಸಿ ಕುಟುಂಬಸ್ಥರು ಕೊಲೆಗಾರರ ವಿರುದ್ಧ ಕ್ರಮಕ್ಕೆ ದೈವದ ಮೊರೆ ಹೋಗಿದ್ದಾರೆ ಎಂದು ವರದಿಯಾಗಿದೆ.

ಪಾಂಗಾಳ ಶರತ್ ವಿ. ಶೆಟ್ಟಿ ಕೊಲೆಯಾಗಿ ತಿಂಗಳು ಕಳೆದ್ರೂ, ಕೊಲೆ ಸಂಬಂಧಿಸಿ ಹಲವು ಮಂದಿಯ ಬಂಧಿಸಲಾಗಿದೆ ಆದ್ರೆ ಕೊಲೆ ಪ್ರಕರಣದ ಪ್ರಮುಖ ಆರೋಪಿಯ ಪತ್ತೆಯಾಗಬೇಕು .

ಕಾರ್ಕಳ: ನಂದಳಿಕೆ ಸಿರಿ ಜಾತ್ರೆ ಪ್ರಚಾರ ಫಲಕದಲ್ಲಿ ಈ ಬಾರಿ ಪರಿಸರಸ್ನೇಹಿ ಪರಿಕಲ್ಪನೆ – Vishwanews24

ಕೊಲೆಗಾರರ ವಿರುದ್ಧ ಕ್ರಮ ತೆಗೆದುಕೊಳ್ಳಲು ಕುಟುಂಬಸ್ಥರು ನಿನ್ನೆ ರಾತ್ರಿ ನಡೆದ ವರ್ತೆ ಪಂಜುರ್ಲಿ ದೈವದ ಕೋಲದಲ್ಲಿ ಅಳಲನ್ನು ತೋಡಿಕೊಂಡಿದ್ದಾರೆ. ಅದಕ್ಕೆ ಪ್ರತ್ಯತ್ತರವಾಗಿ ಶರತ್ ಶೆಟ್ಟಿ ಸಾವಿನಂತೆ ಕೊಲೆಗಾರರನ್ನು ಸರ್ವನಾಶ ಮಾಡುವುದಾಗಿ ದೈವ ಭರವಸೆ ನೀಡಿದೆ ಎಂದು ವರದಿಯಾಗಿದೆ.

ಶರತ್‌ ಶೆಟ್ಟಿ ಕೊಲೆ ಪ್ರಕರಣ :

ಸದ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರಾಗಿದ್ದ ಶರತ್ ವಿ. ಶೆಟ್ಟಿಪಾಂಗಾಳ. ಇವರು ಪಾಂಗಾಳ ಪಡುವಿನ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ನಡೆಯುತ್ತಿದ್ದ ನೇಮದಲ್ಲಿ ಪಾಲ್ಗೊಂಡಿದ್ದಾಗ ಮಾತುಕತೆಗೆಂದು ಮಾರಕಾಸ್ತ್ರದಿಂದ ಇರಿದು ಕೊಲೆಗೈದು ಪರಾರಿಯಾಗಿದ್ದರು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್​ನ 100ನೇ ಸಂಚಿಕೆ ವಿಶ್ವಾದ್ಯಂತ ಪ್ರಸಾರ – Vishwanews24

Leave a Reply