ಪಾಕಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟ : 25ಕ್ಕೂ ಅಧಿಕ  ಸಾವು  – vishwanews24

Featured, ಅಂತಾರಾಷ್ಟ್ರೀಯ ನ್ಯೂಸ್

ಪಾಕಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ  ಬಾಂಬ್ ಸ್ಫೋಟ : 25ಕ್ಕೂ ಅಧಿಕ  ಸಾವು,  30ಕ್ಕೂ ಹೆಚ್ಚು ಜನರಿಗೆ ಗಾಯ , ಕೆಲ ಪ್ರಯಾಣಿಕರ ಸ್ಥಿತಿ ಗಂಭೀರ

ಇಸ್ಲಾಮಾಬಾದ್: ಪಾಕಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ  ಬಾಂಬ್ ಸ್ಫೋಟಗೊಂಡಿದ್ದು, 25ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.

ಇಂದು (ನ.9) ನೈಋತ್ಯ ಪಾಕಿಸ್ತಾನ್‌ನ ಕ್ವೆಟ್ಟಾ ರೈಲು ನಿಲ್ದಾಣದ ಬುಕ್ಕಿಂಗ್ ಕೌಂಟರ್ ಹಾಗೂ ಪ್ಲಾಟ್‌ಫಾರಂ ಬಳಿ ಎರಡು ಬಾಂಬ್ ಸ್ಫೋಟಗೊಂಡಿದೆ.

ತಿಂಡಿ ಪ್ರಿಯರೆ ಎಚ್ಚರ: ಕೇರಳದಿಂದ ಆಮದಾಗುತ್ತಿರುವ ಆಹಾರ ಪದಾರ್ಥಗಳಲ್ಲಿ ಕೃತಕ ಬಣ್ಣ ಪತ್ತೆ – vishwanews24

ಪೊಲೀಸ್ ಕಾರ್ಯಾಚರಣೆಯ ಹಿರಿಯ ಅಧೀಕ್ಷಕ ಮುಹಮ್ಮದ್ ಬಲೋಚ್ ಮಾತನಾಡಿ, ಪೇಶಾವರಕ್ಕೆ ಹೋಗುವ ಎಕ್ಸ್ಪ್ರೆಸ್ ರೈಲು ನಿಲ್ದಾಣದಿಂದ ಹೊರಡಲು ಸಿದ್ಧವಾಗಿತ್ತು. ಜೊತೆಗೆ ಪ್ಯಾಸೆಂಜರ್ ರೈಲಿಗಾಗಿ ಹಲವು ಜನ ಕಾಯುತ್ತಿದ್ದರು. ಇದರಿಂದಾಗಿ ನಿಲ್ದಾಣ ಭಾರೀ ಜನಸಂದಣಿಯಿಂದ ಕೂಡಿತ್ತು. ಈ ವೇಳೆ ಅವಘಡ ಸಂಭವಿಸಿದ್ದು, ಒಂದರ ಹಿಂದೆ ಒಂದರಂತೆ ಒಟ್ಟು ಎರಡು ಬಾಂಬ್ ಸ್ಫೋಟಗೊಂಡಿವೆ. ಮೊದಲ ಬಾಂಬ್ ಸ್ಫೋಟಗೊಂಡಾಗ 4 ಜನ ಹಾಗೂ ಎರಡನೇ ಬಾಂಬ್ ಸ್ಫೋಟಗೊಂಡಾಗ 21ಕ್ಕೂ ಜನರು ಸಾವನ್ನಪ್ಪಿದ್ದಾರೆ. ಇನ್ನೂ ಸ್ಫೋಟದಲ್ಲಿ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳಕ್ಕೆ ಆಗಮಿಸಿರುವ ಬಾಂಬ್ ನಿಷ್ಕ್ರಿಯ ದಳ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದೆ ಎಂದು ತಿಳಿಸಿದ್ದಾರೆ.

Leave a Reply