ಪಾಕಿಸ್ತಾನವನ್ನು ನಾಶ ಮಾಡಲು ನಮ್ಮ ದೇಶ ಭಾರತಕ್ಕೆ ಒಂದೇ ದಿನ ಸಾಕು: ಹುತಾತ್ಮ ಯೋಧನ ತಾಯಿ – Vishwanews24
ಮೀರತ್: ಜಮ್ಮುಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರಗಾಮಿಗಳು ನಡೆಸಿದ ಭೀಕರ ದಾಳಿಯ ಕಾರಣದಿಂದ ಹಲವಾರು ಭಾರತಿಯ ಸೈನಿಕರು ಹುತಾತ್ಮರಾಗಿದ್ದಾರೆ.
ಉತ್ತರ ಪ್ರದೇಶದ ಮೀರತ್ನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಹುತಾತ್ಮ ಯೋಧನ ತಾಯಿ “ಪಾಕಿಸ್ತಾನ ನಮ್ಮ ದೇಶದ ಅನೇಕ ಮಕ್ಕಳನ್ನು ಹತ್ಯೆ ಮಾಡಿದೆ. ಭಾರತಕ್ಕಿಂತ ಪಾಕ್ ದೊಡ್ಡದೇನಲ್ಲ. ನಮ್ಮನ್ನು ನಾಶ ಮಾಡಲು ಅದರ ಕೈಯಲ್ಲಿ ಸಾಧ್ಯವಾಗುವುದಿಲ್ಲ. ಆದರೆ, ಭಾರತಕ್ಕೆ ಪಾಕ್ ನಾಶಮಾಡಲು ಒಂದೇ ದಿನ ಸಾಕು, ದೇಶಕ್ಕಾಗಿ ಜೀವನವನ್ನು ತ್ಯಾಗ ಮಾಡಿದ ನನ್ನ ಮಗನ ಮೇಲೆ ನನಗೆ ಹೆಮ್ಮೆ ಇದೆ ಎಂದು ಸ್ಫೂರ್ತಿಯ ಮಾತುಗಳನ್ನಾಡಿದ್ದಾರೆ.
ಇನ್ನು ನನ್ನ ಮಗ ತನ್ನ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾನೆ. ಈ ಕುರಿತಾದಂತೆ ನನಗೆ ಹೆಮ್ಮೆಯಿದೆ ಎಂದು ಅಜಯ್ ಕುಮಾರ್ ತಾಯಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
Meerut: Mother of Sepoy Ajay Kumar who lost his life in encounter with terrorists in #Pulwama y’day, says,"Pakistan has killed so many sons;Pak isn’t that big that India can’t destroy it. India can destroy it in one day. I'm proud of my son,he sacrificed his life for the country" pic.twitter.com/zTdARAVd9B
— ANI UP (@ANINewsUP) February 19, 2019
