ಪಾಕಿಸ್ಥಾನದ ವಿರುದ್ಧ ಯುದ್ಧ ಮಾಡಲೇಬೇಕು, ಪಾಕಿಸ್ಥಾನಕ್ಕೆ ಯುದ್ಧ ಬಿಟ್ಟರೆ ಬೇರೆ ಯಾವುದೇ ಭಾಷೆ ಅರ್ಥವಾಗುವುದಿಲ್ಲ : ಬಾಬಾ ರಾಮದೇವ್ – Vishwanews24
ಹರಿದ್ವಾರ : ‘ನಾವು ಪಾಕಿಸ್ಥಾನದ ವಿರುದ್ಧ ಯುದ್ಧ ಮಾಡಲೇಬೇಕು, ಏಕೆಂದರೆ ಇಸ್ಲಾಮಾಬಾದ್ ಗೆ ಯುದ್ಧ ಬಿಟ್ಟರೆ ಬೇರೆ ಯಾವುದೇ ಭಾಷೆ ಅರ್ಥವಾಗುವುದಿಲ್ಲ’ ಎಂದು ಯೋಗ ಗುರು ಬಾಬಾ ರಾಮದೇವ್ ಹೇಳಿದ್ದಾರೆ.
ಕಳೆದ ಫೆ.14ರಂದು ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕನೋರ್ವ ನಡೆಸಿದ ಆತ್ಮಾಹುತಿ ಬಾಂಬ್ ದಾಳಿಗೆ ಕನಿಷ್ಠ 40 ಸಿಆರ್ಪಿಎಫ್ ಯೋಧರು ಬಲಿಯಾಗಿರುವುದಕ್ಕೆ ತೀವ್ರ ಶೋಕ, ಆಘಾತ ವ್ಯಕ್ತಪಡಿಸಿರುವ ಬಾಬಾ ರಾಮದೇವ್, ‘ಯುದ್ಧದ ಹೊರತು ಯಾರೂ ಪರಿಶುದ್ಧರಾಗಲಾರರು; ಪಾಕಿಸ್ಥಾನ ಜನತೆಯ ವಿರುದ್ಧ ನಮಗೆ ಯಾವುದೇ ದೂರುಗಳಿಲ್ಲ; ಆದರೆ ಪಾಕಿಸ್ಥಾನದಲ್ಲಿ ಅಧಿಕಾರದಲ್ಲಿರುವವರಿಗೆ ಯುದ್ಧ ಬಿಟ್ಟರೆ ಬೇರೆ ಭಾಷೆ ಅರ್ಥವಾಗುವುದಿಲ್ಲ; ಕಳೆದ 70 ವರ್ಷಗಳಿಂದಲೂ ನಾವು ಅವರೊಂದಿಗೆ ಮಾತನಾಡುತ್ತಲೇ ಬಂದಿದ್ದೇವೆ; ಆದರೆ ಅದೇ ವೇಳೆ ನಾವು ನಮ್ಮ 50,000 ಜನರನ್ನು ಕಳೆದುಕೊಂಡಿದ್ದೇವೆ’ ಎಂದು ಹೇಳಿದರು.
‘ನಮ್ಮ ಜವಾನರನು ನಾವು ಕಳೆದುಕೊಳ್ಳುವ ಮಾತೇ ಇಲ್ಲ ; ಭಯೋತ್ಪಾದನೆ ಸಮಸ್ಯೆಯನ್ನು ಪೂರ್ಣವಾಗಿ ನಿವಾರಿಸಲು ಯುದ್ಧ ನಡೆಯಲೇಬೇಕಿದೆ ‘ ಎಂದು ಬಾಬಾ ರಾಮದೇವ್ ಹೇಳಿದರು.


