“ಪಾಕ್ ಪರ ಘೋಷಣೆ ಕೂಗುವ, ದೇಶದ್ರೋಹಿ ಕೃತ್ಯ ಎಸಗುವ, ಫೇಸ್ಬುಕ್ ಪೋಸ್ಟ್ ಹಾಕುವ ದೇಶದ್ರೋಹಿಗಳಿಗೆ ಇನ್ನು ಮುಂದೆ ಜೈಲು ಶಿಕ್ಷೆ ಇಲ್ಲ , ನೇರವಾಗಿ ಗುಂಡೇಟು : ಬಸನಗೌಡ ಪಾಟೀಲ ಯತ್ನಾಳ -Vishwanews24
ವಿಜಯಪುರ : “ದೇಶದ್ರೋಹದ ಕೆಲಸದಲ್ಲಿ ತೊಡಗುವವರಿಗೆ ಇನ್ನು ಮುಂದೆ ಜೈಲು ಶಿಕ್ಷೆ ಇಲ್ಲ, ನೇರವಾಗಿ ಗುಂಡೇಟು” ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಪಾಕ್ ಪರ ಘೋಷಣೆ ಕೂಗುವ, ದೇಶದ್ರೋಹಿ ಕೃತ್ಯ ಎಸಗುವ, ಫೇಸ್ಬುಕ್ ಪೋಸ್ಟ್ ಹಾಕುವ ದೇಶದ್ರೋಹಿಗಳಿಗೆ ನೇರವಾಗಿ ಗುಂಡೇಟು ಬೀಳುತ್ತವೆ” ಎಂದರು.
“ಮೋದಿ, ಅಮಿತ್ ಶಾ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದಾರಾ ಎಂದು ಕಾಂಗ್ರೆಸ್ ಕೇಳಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸೋನಿಯಾ ಗಾಂಧಿ, ಸಿದ್ಧರಾಮಯ್ಯ ಅವರು ಪಾಲ್ಗೊಂಡಿದ್ದಾರಾ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರಂಥ ನಾಯಕರು ಪಾಲ್ಗೊಂಡಿರಲಿಲ್ಲವೇ” ಎಂದು ಕೇಳಿದ್ದಾರೆ.
“ಪಾಕ್ ಎಂಬ ಅಕ್ರಮ ಸಂತಾನ, ನೇತಾಜಿ ಭೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರಧಾನಿ ಆಗಿದ್ದರೆ ಹುಟ್ಟುತ್ತಲೇ ಇರಲಿಲ್ಲ. ಮೋತಿಲಾಲ್ ನೆಹರು ತಮ್ಮ ಮಗನನ್ನು ಪ್ರಧಾನಿ ಮಾಡುವ ಸ್ವಾರ್ಥಕ್ಕಾಗಿ ಪಾಕ್ ಎಂಬ ಬಚ್ಚಾ ಹುಟ್ಟಿಕೊಂಡಿತು” ಎಂದರು.
