ಪಾಕ್ ವಶದಲ್ಲಿದ್ದ 55 ಭಾರತೀಯ ಮೀನುಗಾರರ ಬಿಡುಗಡೆ -Vishwanews24

Featured, ಅಂತಾರಾಷ್ಟ್ರೀಯ ನ್ಯೂಸ್

ಇಸ್ಲಾಮಾಬಾದ್: ಪಾಕಿಸ್ತಾನ ದೇಶವು ಸದ್ಭಾವನಾ ಸಂದೇಶ ಸಾರುವ ಮೂಲಕ ಪಾಕಿಸ್ತಾನ ಜೈಲಿನಲ್ಲಿದ್ದ 55 ಭಾರತೀಯ ಮೀನುಗಾರರು ಹಾಗೂ ಅನ್ಯ ಐವರು ನಾಗರಿಕರನ್ನು ಬಿಡುಗಡೆಗೊಳಿಸಿದೆ.

ಈದಿ ಫೌಂಡೇಷನ್ ಅಧ್ಯಕ್ಷ ಫೈಜಲ್ ಈದಿ ಹಾಗೂ ಸಾಧ್ ಈದಿ ಅವರ ಸಲಹೆಯ ಮೇರೆಗೆ ಭಾರತೀಯ ಮೀನುಗಾರರನ್ನು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ ಕರೆ ತಂದು, ನಂತರ ಬಸ್ಸಿನಲ್ಲಿ ಲಾಹೋರ್ ಕ್ಕೆ ಕಳುಹಿಸಲಾಯಿತು. ಅಲ್ಲದೆ ಬಿಡುಗಡೆಗೊಂಡವರಿಗೆ ಈದಿ ಫೌಂಡೇಷನ್ ಐದು ಸಾವಿರ ರೂ. ನೀಡಿ ಸತ್ಕರಿಸಲಾಗಿದ್ದು, ವಿಶೇಷ ಬಸ್ ಮೂಲಕ ಅವರನ್ನು ವಾಘಾ ಗಡಿಗೆ ಕಳುಹಿಸಿಕೊಡಲಿದ್ದಾರೆ.

ಎರಡು ದೇಶಗಳ ಮಧ್ಯೆ ಸದ್ಭಾವನಾ ಸಂದೇಶ ಸಾರುವುದಕ್ಕಾಗಿ ಪಾಕಿಸ್ತಾನ, ಭಾರತೀಯ 360 ಕೈದಿಗಳನ್ನು ಬಿಡುಗಡೆಗೊಳಿಸುವುದಾಗಿ ಘೋಷಿಸಿದೆ. ಇದರಲ್ಲಿ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಗೊಂಡ 355 ಮೀನುಗಾರರು ಹಾಗೂ ಐವರು ಭಾರತೀಯ ನಾಗರಿಕರು ಕೂಡ ಒಳಗೊಂಡಿದ್ದಾರೆ.

ಜನವರಿ ತಿಂಗಳಲ್ಲಿಯೇ ಎರಡು ದೇಶಗಳು ಕೈದಿಗಳ ಪಟ್ಟಿಯನ್ನು ಪರಸ್ಪರ ವಿನಿಮಯ ಮಾಡಿಕೊಂಡಿದ್ದವು. ಅದರನ್ವಯ ಭಾರತೀಯ ಜೈಲಿನಲ್ಲಿದ 347 ಪಾಕಿಸ್ತಾನಿ ಕೈದಿಗಳು ಬಂಧಿಯಾಗಿದ್ದು, ಅದರಲ್ಲಿ 249 ನಾಗರಿಕರು ಹಾಗೂ 98 ಮೀನುಗಾರರಿದ್ದಾರೆ.