ಪಾದೂರು ISPRL ಯೋಜನೆಯ ಎರಡನೇ ಹಂತದ ವಿಸ್ತರಣೆಗೆ‌ ಸರಕಾರ ಭೂಸ್ವಾಧಿನದ ನೋಟಿಫಿಕೆಶನ್ -ಗ್ರಾಮಸ್ಥರ ನ್ಯಾಯಯುತ ಹೋರಾಟಕ್ಕೆ ಸಂಪೂರ್ಣ ಬೆಂಬಲ- ಕಾಪು ಶಾಸಕ ಲಾಲಾಜಿ_vishwanews24

Featured, ಉಡುಪಿ

ಪಾದೂರು ISPRL ಯೋಜನೆಯ ಎರಡನೇ ಹಂತದ ವಿಸ್ತರಣೆಗೆ‌ ಸರಕಾರ ಭೂಸ್ವಾಧಿನದ ನೋಟಿಫಿಕೆಶನ್ -ಗ್ರಾಮಸ್ಥರ ನ್ಯಾಯಯುತ ಹೋರಾಟಕ್ಕೆ ಸಂಪೂರ್ಣ ಬೆಂಬಲ- ಕಾಪು ಶಾಸಕ ಲಾಲಾಜಿ

ಕಾಪು: ಪಾದೂರು ISPRL ಯೋಜನೆಯ ಎರಡನೇ ಹಂತದ ವಿಸ್ತರಣೆಗೆ‌ ಸರಕಾರ 210 ಎಕರೆ ಭೂಮಿಯನ್ನು ಭೂಸ್ವಾಧಿನದ ನೋಟಿಫಿಕೆಶನ್ ಹೊರಡಿಸಿದ್ದು ಭೂಸಂತ್ರಸ್ತರಿಗೆ ಸಿಗ ಬೇಕಾದ ನ್ಯಾಯಯುತ ಬೆಲೆ ಹಾಗೂ ಹೋರಾಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದಾಗಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ವಿಶ್ವನ್ಯೂಸ್24 ಗೆ ತಿಳಿಸಿದ್ದಾರೆ.
ಈ ಹಿಂದೆ ಮೊದಲ ಹಂತದ ಭೂಸ್ವಾಧಿನ ಪ್ರಕ್ರಿಯೆ ನಡೆದ ಸಮಯದಲ್ಲಿ ಭೂಸಂತ್ರಸ್ಥರಿಗೆ ಗರಿಷ್ಠ ಪರಿಹಾರ ನೀಡುವಲ್ಲಿ ಪ್ರಯತ್ನ ಮಾಡಿದ್ದೇನೆ ಮತ್ತು ಈ ಹಂತದ ಪ್ರಕ್ರಿಯೆಯಲ್ಲಿ ಗ್ರಾಮಸ್ಥರಿಗೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಮತ್ತು ನ್ಯಾಯಯುತ ಹೋರಾಟದಲ್ಲಿ ಸಕ್ರಿಯವಾಗಿ ಬೆಂಬಲಿಸುವುದಾಗಿ ಮತ್ತು ಜಿಲ್ಲಾಧಿಕಾತಿಗಳ ಜತೆಗೆ ಮತ್ತು ಸಂಬಂಧಪಟ್ಟ ಇಲಾಖೆಯ ಜತೆ ಚರ್ಚಿಸುವುದಾಗಿ ಅವರು ತಿಳಿಸಿದರು.