ಪಿಯು ತರಗತಿ ಆರಂಭ : ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀತಿ ಸಂಹಿತೆ ಕಡ್ಡಾಯಗೊಳಿಸಿದ ಶಿಕ್ಷಣ ಇಲಾಖೆ – Vishwnaews24

Featured, ರಾಜ್ಯ ನ್ಯೂಸ್

ಪಿಯು ತರಗತಿ ಆರಂಭ : ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀತಿ ಸಂಹಿತೆ ಕಡ್ಡಾಯಗೊಳಿಸಿದ ಶಿಕ್ಷಣ ಇಲಾಖೆ

ಧಾರ್ಮಿಕ ವಸ್ತ್ರ ಧರಿಸಿ ಬಂದರೆ  ತರಗತಿಗೆ  ನೋ ಎಂಟ್ರಿ

ಬೆಂಗಳೂರು: ಇಂದಿನಿಂದ ಪಿಯು ತರಗತಿಗಳು ಆರಂಭಗೊಂಡಿದ್ದು, ಹಿಜಾಬ್ ವಿವಾದದ ಹಿನ್ನಲೆಯಲ್ಲಿ ಶಿಕ್ಷಣ ಇಲಾಖೆ ಸಮವಸ್ತ್ರ ನೀತಿ ಸಂಹಿತೆಯನ್ನು ಕಡ್ಡಾಯಗೊಳಿಸಿದೆ.

ಈ ಕುರಿತು ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಇಂದಿನಿಂದ ಪಿಯು ತರಗತಿಗಳು ಆರಂಭಗೊಂಡಿವೆ. ಕಾಲೇಜಿಗೆ ಆಗಮಿಸುವಂತ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀತಿ ಸಂಹಿತೆ ಪಾಲನೆ ಕಡ್ಡಾಯವಾಗಿದೆ. ಒಂದು ವೇಳೆ ಈ ನಿಯಮ ಮೀರಿ ಕಾಲೇಜಿಗೆ ಬಂದರೆ ಅಂತಹ ವಿದ್ಯಾರ್ಥಿಗಳಿಗೆ ನೋ ಎಂಟ್ರಿ ಎಂದಿದ್ದಾರೆ.

ಇನ್ನು ಪಿಯು ಕಾಲೇಜುಗಳಿಗೆ ಎಲ್ಲಾ ಮಾದರಿಯ ಧಾರ್ಮಿಕ ವಸ್ತ್ರ ಸಂಹಿತೆಯನ್ನು ನಿರ್ಬಂಧಿಸಲಾಗಿದ್ದು, ಧಾರ್ಮಿಕ ವಸ್ತ್ರ ಧರಿಸಿ ಬಂದರೆ ಕಾಲೇಜಿನ ತರಗತಿಗೆ ಅವಕಾಶ ನೀಡೋದಿಲ್ಲ. ಸರ್ಕಾರ ಹೈಕೋರ್ಟ್ ನಿಯಮವನ್ನು ಪಾಲಿಸುತ್ತಿದೆ. ಸಮವಸ್ತ್ರ ನಿಯಮ ಉಲ್ಲಂಘಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಉಡುಪಿ : ಜೂನ್ 13 ರಿಂದ 23 ರ ವರೆಗೆ ವಿಕಲಚೇತನರಿಗೆ ಸಾಧನ ಸಲಕರಣೆ ವಿತರಣೆ: ತಪಾಸಣಾ ಶಿಬಿರ – Vishwanews24

Leave a Reply