ಪುಂಜಾಲಕಟ್ಟೆ : ಪತಿಗೆ ತಿಳಿಯದಂತೆ ಪತ್ನಿ ಎರಡನೇ ವಿವಾಹ : ಕೋರ್ಟ್‌ ಮೊರೆ ಹೋದ ಪತಿ  – Vishwanews24

Featured, ಉಡುಪಿ

ಪುಂಜಾಲಕಟ್ಟೆ : ಪತಿಗೆ ತಿಳಿಯದಂತೆ ಪತ್ನಿ ಎರಡನೇ ವಿವಾಹ : ಕೋರ್ಟ್‌ ಮೊರೆ ಹೋದ ಪತಿ 

ಪುಂಜಾಲಕಟ್ಟೆ: ಪತಿಗೆ ತಿಳಿಯದಂತೆ ಪತ್ನಿ ಎರಡನೇ ವಿವಾಹವಾದ ಬಗ್ಗೆ ಪತಿ ನ್ಯಾಯಾಲಯಕ್ಕೆ ದೂರು ನೀಡಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯ ಪೊಲೀಸ್‌ ಠಾಣೆಗೆ ಆದೇಶಿಸಿದ ಘಟನೆ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಪಣಕಜೆ, ಮಂಡಾಡಿ ನಿವಾಸಿ ಉದಯ ನಾಯಕ್‌ ಅವರು ಈ ಬಗ್ಗೆ ನ್ಯಾಯಾಲಯಕ್ಕೆ ದೂರು ನೀಡಿದ್ದು, ಬೆಳ್ತಂಗಡಿ ಸಿಜೆ ಮತ್ತು ಜೆಎಮ್‌ಎಫ್ಸಿ ನ್ಯಾಯಾಲಯ ಪ್ರಕರಣ ದಾಖಲಿಸಿ ವರದಿ ಸಲ್ಲಿಸುವಂತೆ ಪುಂಜಾಲಕಟ್ಟೆ ಪೊಲೀಸ್‌ ಠಾಣೆಗೆ ಆದೇಶಿಸಿದೆ.

ಉಡುಪಿ : ಗರ್ಭಿಣಿ ನಾಪತ್ತೆ – Vishwanews24

ಉದಯ ನಾಯಕ್‌ ಅವರು ಅನಿತಾ ನಾಯಕ್‌ ಅವರನ್ನು 2018ರಲ್ಲಿ ಮದುವೆಯಾಗಿದ್ದು, ಮದುವೆ ಬಳಿಕ ಜೂನ್‌ 2020ರ ತನಕ ಇಬ್ಬರೂ ಒಟ್ಟಿಗೆ ಇದ್ದರು. ಬಳಿಕ ಹಲವಾರು ಅಡೆತಡೆಗಳು ಬಂದಿದ್ದರಿಂದ ಉದಯ ನಾಯಕ್‌ ಡೈವೋರ್ಸ್‌ ಪಿಟಿಷನ್‌ ಸಲ್ಲಿಸಿದ್ದರು. ಈ ಪ್ರಕರಣವು ವಿಚಾರಣೆಯಲ್ಲಿರುವಾಗಲೇ ಅನಿತಾ ಅವರು ಹರಿಕೃಷ್ಣ ಗಣಪತ್‌ ರಾವ್‌ ಕೀಳು ಅವರ ಜತೆ ವಿವಾಹವಾಗಿರುವುದಾಗಿ ಉದಯ ನಾಯಕ್‌ ಆರೋಪಿಸಿದ್ದಾರೆ. ಈ ಮದುವೆಯು ಕಾನೂನು ಬಾಹಿರವಾಗಿದ್ದರಿಂದ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಕೋರಿದ್ದಾರೆ. ಪುಂಜಾಲಕಟ್ಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಡುಪಿ : ಗರ್ಭಿಣಿ ನಾಪತ್ತೆ – Vishwanews24

Leave a Reply