ಪುತ್ತೂರು ಎಸ್ಡಿಪಿಐ ಅಭ್ಯರ್ಥಿ ಪರವಾಗಿ ನಾಮಪತ್ರ ಸಲ್ಲಿಕೆ – ಜೈಲಿನಿಂದಲೇ ಚುನಾವಣೆ ಎದುರಿಸಲಿರುವ ಶಾಫಿ ಬೆಳ್ಳಾರೆ – Vishwanews24
ಪುತ್ತೂರು ಎಸ್ಡಿಪಿಐ ಅಭ್ಯರ್ಥಿ ಪರವಾಗಿ ನಾಮಪತ್ರ ಸಲ್ಲಿಕೆ – ಜೈಲಿನಿಂದಲೇ ಚುನಾವಣೆ ಎದುರಿಸಲಿರುವ ಶಾಫಿ ಬೆಳ್ಳಾರೆ
ಪುತ್ತೂರು: ಎಸ್’ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾಫಿ ಬೆಳ್ಳಾರೆ ಅವರ ಪರವಾಗಿ ಪಕ್ಷದ ನಾಯಕರು ನಾಮಪತ್ರ ಸಲ್ಲಿಸಿದರು.
ಬುಧವಾರ ಎಪಿಎಂಸಿ ಕಚೇರಿ ಬಳಿಯಿರುವ ಪಕ್ಷದ ಕಚೇರಿ ಬಳಿಯಿಂದ ಸಾವಿರಾರು ಮಂದಿ ಕಾರ್ಯಕರ್ತರ ಜೊತೆ ಮೆರವಣಿಗೆ ಮೂಲಕ ತೆರಳಿದ ನಾಯಕರು, ಶಾಫಿ ಬೆಳ್ಳಾರೆ ಪರವಾಗಿ ನಾಮಪತ್ರ ಸಲ್ಲಿಸಿದರು. ಶಾಫಿ ಬೆಳ್ಳಾರೆಯು ಜೈಲಿನಲ್ಲಿದ್ದು ಈ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು ನಾಮಪತ್ರ ಸಲ್ಲಿಕೆ ಮಾಡಿದರು.
ಮಂಗಳೂರು: ಕಾರು ಚಾಲಕ ಜನಾರ್ದನ ಪೂಜಾರಿ ಕೊಲೆ ಪ್ರಕರಣ ; ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು – Vishwanews24
ಎಸ್’ಡಿಪಿಐ ಮುಖಂಡರಾದ ರಿಯಾಝ್ ಫರಂಗಿಪೇಟೆ, ಇಲ್ಯಾಸ್ ತುಂಬೆ, ವಿಕ್ಟರ್ ಮಾರ್ಟಿಸ್, ಅನ್ವರ್ ಸಾದಾತ್ ಬಜತ್ತೂರು, ಅಲ್ಫಾನ್ಸ್ ಫ್ರಾಂಕೋ, ಅಕ್ಬರ್ ಬೆಳ್ತಂಗಡಿ, ರಿಯಾಝ್ ಕಡಂಬು, ಮೂನಿಶ್ ಅಲಿ ಬಂಟ್ವಾಳ, ಶಾಕಿರ್ ಅಳಕೆಮಜಲು, ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷ ಇಬ್ರಾಹಿಂ ಸಾಗರ್, ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಸಿದ್ದಿಕ್ ಕೆ.ಎ, ಹಮೀದ್ ಸಾಲ್ಮರ, ಎಂ.ಎ ರಫೀಕ್ ಸವಣೂರು, ನಸ್ರಿಯಾ ಬೆಳ್ಳಾರೆ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು. ಪಕ್ಷದ ನಾಯಕರು ಭಾಷಣ ಮಾಡಿದರು.
ಸುಳ್ಳು ಕೇಸಿನಲ್ಲಿ ಶಾಫಿ ಬೆಳ್ಳಾರೆಯವರನ್ನು ಜೈಲಿಗಟ್ಟಲಾಗಿದೆ. ಅವರು ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂಬ ದುರುದ್ದೇಶದಿಂದ ಸುಳ್ಳು ಪ್ರಕರಣದಡಿ ಅವರನ್ನು ಸಿಲುಕಿಸಲಾಗಿದೆ. ಆದ್ದರಿಂದ ಶಾಫಿ ಬೆಳ್ಳಾರೆಯವರನ್ನು ಈ ಚುನಾವಣೆಯಲ್ಲಿ ಗೆಲ್ಲಿಸಬೇಕೆಂದು ಮುಖಂಡರು ಕರೆ ನೀಡಿದರು.
ಮಂಗಳೂರು: ಕಾರು ಚಾಲಕ ಜನಾರ್ದನ ಪೂಜಾರಿ ಕೊಲೆ ಪ್ರಕರಣ ; ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು – Vishwanews24
