ಪುತ್ತೂರು : ಕಾಳು ಮೆಣಸು ಕೊಯ್ಯುವ ವೇಳೆ ತೆಂಗಿನ ಮರದಿಂದ ಬಿದ್ದು ನಿವೃತ್ತ ಶಿಕ್ಷಕ ಸಾವು – vishwanews24

Featured, ದಕ್ಷಿಣ ಕನ್ನಡ

ಕಾಳು ಮೆಣಸು ಕೊಯ್ಯುವ ವೇಳೆ ತೆಂಗಿನ ಮರದಿಂದ ಬಿದ್ದು ನಿವೃತ್ತ ಶಿಕ್ಷಕ ಸಾವು

ಪುತ್ತೂರು : ಬೆಟ್ಟಂಪಾಡಿ ಗ್ರಾಮದ ಗುಮ್ಮಟ್ಟೆಗದ್ದೆಯಲ್ಲಿ ಸೋಮವಾರ, ಕಾಳುಮೆಣಸು ಕೀಳುವಾಗ ತೆಂಗಿನ ಮರದಿಂದ ಬಿದ್ದು ನಿವೃತ್ತ ಮುಖ್ಯೋಪಾಧ್ಯಾಯರು ಸಾವನ್ನಪ್ಪಿದ್ದಾರೆ.

ಮೃತರನ್ನು ಬೆಟ್ಟಂಪಾಡಿ ಗ್ರಾಮದ ಗುಮ್ಮಟ್ಟೆಗದ್ದೆ ನಿವಾಸಿ ನಾರಾಯಣ ನಾಯಕ್ ಪೈಂಟಿಮುಗೇರು ಎಂದು ಗುರುತಿಸಲಾಗಿದೆ. ಮನೆಯ ಮುಂದೆ ತೆಂಗಿನ ಮರದ ಮೇಲೆ ಬೆಳೆದಿದ್ದ ಕಾಳು ಮೆಣಸು ಕೀಳಲು ಅಲ್ಯೂಮಿನಿಯಂ ಏಣಿ ಹತ್ತುತ್ತಿದ್ದಾಗ ಜಾರಿ ಏಣಿಯೊಂದಿಗೆ ಬಿದ್ದಿದ್ದಾರೆ.

ಕೆಳಗೆ ಬಿದ್ದಾಗ ನಾರಾಯಣ ನಾಯಕ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಮಾರ್ಗಮಧ್ಯೆ ಅವರು ಮೃತಪಟ್ಟರು. ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಉಡುಪಿ : ಶೀರೂರು ಪರ್ಯಾಯ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಧನ್ಯವಾದ : ಯಶ್ಪಾಲ್ ಸುವರ್ಣ – vishwanews24

ನಾರಾಯಣ ನಾಯಕ್ ಬಡಗನ್ನೂರಿನ ಸರ್ಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾಗಿದ್ದರು. ಪಡುಮಲೆ ಶ್ರೀ ಕೋವೆ ಶಾಸ್ತಾರ ವಿಷ್ಣು ಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು ಮತ್ತು ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

Leave a Reply