ಪುತ್ತೂರು: ಕೆಎಸ್ಆರ್ ಟಿಸಿ ಬಸ್ ಮತ್ತು ಬೈಕ್ ಢಿಕ್ಕಿ : ಸವಾರ ಸ್ಥಳದಲ್ಲೇ ಸಾವು – Vishwanews24
ಪುತ್ತೂರು: ಕೆಎಸ್ಆರ್ ಟಿಸಿ ಬಸ್ ಮತ್ತು ಬೈಕ್ ಢಿಕ್ಕಿ : ಸವಾರ ಸ್ಥಳದಲ್ಲೇ ಸಾವು
ಪುತ್ತೂರು: ಕೆಎಸ್ಆರ್ ಟಿಸಿ ಬಸ್ ಮತ್ತು ಬೈಕ್ ಢಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ಬೆಳಗ್ಗೆ ನರಿಮೊಗರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕುಂಡಡ್ಕ ನಿವಾಸಿ ಮೋಕ್ಷಿತ್ ಗೌಡ (23) ಮೃತ ದುರ್ದೈವಿ.
ಪುರುಷರಕಟ್ಟೆಯಲ್ಲಿ ರೂಂ ಮಾಡಿಕೊಂಡು ಉಳಿದುಕೊಂಡಿದ್ದ ಮೋಕ್ಷಿತ್ ತನ್ನ ಬೈಕನ್ನು ಸರ್ವಿಸ್ ಗೆ ಇಟ್ಟಿದ್ದರು. ಸರ್ವಿಸ್ ಗೆ ಇಟ್ಟಿದ್ದ ಬೈಕನ್ನು ವಾಪಾಸ್ಸು ತರುತ್ತಿದ್ದ ವೇಳೆ ಕಾಣಿಯೂರು ಸುಬ್ರಹ್ಮಣ್ಯ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಮೋಕ್ಷಿತ್ ಗೌಡ ಅವರು ಪುರುಷರಕಟ್ಟೆಯಲ್ಲಿರುವ ಫ್ಯಾಕ್ಟರಿಯೊಂದರಲ್ಲಿ ಮೆಷಿನ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇನ್ನು ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರ ಠಾಣಾ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
ಮಲ್ಪೆ: ನಾಳೆಯಿಂದ ಸೆ.15ರ ವರೆಗೆ ಪ್ರವಾಸಿ ಬೋಟ್ ಚಟುವಟಿಕೆ ಸ್ಥಗಿತ – Vishwanews24
