ಪುತ್ತೂರು : ಪಾನಮತ್ತ ಪ್ರಯಾಣಿಕೋರ್ನಿಗೆ ಕಾಲಿನಿಂದ ಒದ್ದು ಹೊರದಬ್ಬಿದ KSRTC ಕಂಡಕ್ಟರ್ ಅಮಾನತು : ಸಾರಿಗೆ ನಿಗಮ ಆದೇಶ – Vishwanews24
ಪುತ್ತೂರು : ಪಾನಮತ್ತ ಪ್ರಯಾಣಿಕೋರ್ನಿಗೆ ಕಾಲಿನಿಂದ ಒದ್ದು ಹೊರದಬ್ಬಿದ KSRTC ಕಂಡಕ್ಟರ್ ಅಮಾನತು : ಸಾರಿಗೆ ನಿಗಮ ಆದೇಶ
ಪುತ್ತೂರು: ಪಾನಮತ್ತನಾಗಿದ್ದಂತ ಪ್ರಯಾಣಿಕನೊಬ್ಬ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ತನ್ನೂರಿಗೆ ತೆರಳೋದಕ್ಕೆ ಹೋದಂತ ಸಂದರ್ಭದಲ್ಲಿ, ಆತನ ಮೇಲೆ ಹಲ್ಲೆ ನಡೆಸಿ, ಹೊರಗೆ ಕಾಲಿನಿಂದ ಒದ್ದು ನಿರ್ವಾಹಕ ತಳ್ಳಿದ್ದರು. ಇದರಿಂದಾಗಿ ಅಂಗಾತವಾಗಿ ಬಸ್ ಡೋರಿನಿಂದ ಹೊರಗೆ ಬಿದ್ದಂತ ಪ್ರಯಾಣಿಕ ಗಾಯಗೊಂಡಿದ್ದನು.
ಈ ಘಟನೆಯ ಹಿನ್ನಲೆಯಲ್ಲಿ ನಿರ್ವಾಹಕನನ್ನು ಅಮಾನತುಗೊಳಿಸಿ, ಸಾರಿಗೆ ನಿಗಮ ಆದೇಶಿಸಿದೆ.
ಕಂಡಕ್ಟರ್ ಮಾತಿಗೆ ಒಪ್ಪದಂತ ಪಾನಮತ್ತ ಪ್ರಯಾಣಿಕ ಮಾತ್ರ ಬಸ್ಸಿನಿಂದ ಇಳಿದಿಲ್ಲ. ಈ ವೇಳೆಗೆ ಸಿಟ್ಟುಗೊಂಡಂತ ನಿರ್ವಾಹಕ ಆತನ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಬಸ್ಸಿನ ಡೋರಿನಿಂದ ಕಾಲಿನಿಂದ ಒದ್ದಿದ್ದಾನೆ. ಆಗ ಪಾನಮತ್ತ ಪ್ರಯಾಣಿಕ ರಸ್ತೆಗೆ ಅಂಗಾತ ಬಿದ್ದು ಪೆಟ್ಟುಗೊಂಡಿರೋ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಪುತ್ತೂರು : ಪಾನ ಮತ್ತ ಪ್ರಯಾಣಿಕೋರ್ವನಿಗೆ ಕಾಲಿನಿಂದ ಒದ್ದು ಹೊರದಬ್ಬಿದ KSRTC ಕಂಡಕ್ಟರ್..
ಈ ವಿಷಯ ತಿಳಿದಂತ ರೈತ ಸಂಘದ ಜಿಲ್ಲಾಧ್ಯಕ್ಷ ಅಮರನಾಥ ಆಳ್ವ, ಸಾರಿಗೆ ಬಸ್ ನಿರ್ವಾಹಕನ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ಸಂಬಂಧ ಪಟ್ಟಂತ ಅಧಿಕಾರಿಗಳು ಈ ನಡೆ ತೋರಿದಂತ ನಿರ್ವಾಹಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

ಈ ಬೆನ್ನಲ್ಲೇ ಕೆ ಎಸ್ ಆರ್ ಟಿಸಿಯಿಂದ ಚಾಲಕ ಕಂ ನಿರ್ವಾಹಕ ಸುಖರಾಜ ರೈ ಎಂ ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ. ಅಲ್ಲದೇ ನಿಗಮದ ಚಾಲನಾ ಸಿಬ್ಬಂದಿಗಳಿಗೆ ಸಾರ್ವಜನಿಕ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ನಿರಂತರ ತರಬೇತಿ ಹಾಗೂ ತಿಳುವಳಿಕೆ ನೀಡಿದ್ದಾಗ್ಯೂ ಸಹ ಈ ರೀತಿಯ ಘಟನೆ ನಡೆದಿರುವುದು ದುಃಖದ ಸಂಗತಿಯಾಗಿದೆ ಎಂದಿದೆ.
ನಿಗಮದ ಸಿಬ್ಬಂದಿಗಳಿಗೆ ಇನ್ನೂ ಹೆಚ್ಛಿನ ತರಬೇತಿ ನೀಡಿ ಪ್ರಯಾಣಿಕರೊಡನೆ ಸೌಜನ್ಯವಾಗಿ ವರ್ತಿಸುವ ಸಂಬಂಧ ಕ್ರಮಕೈಗೊಳ್ಳಲಾಗುವುದು ಹಾಗೂ ಈ ರೀತಿಯ ಘಟನೆಗಳಿಗೆ ಕಾರಣರಾಗುವ ಸಿಬ್ಬಂದಿಗಳ ಮೇಲೆ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಲಾಗಿದೆ. ಸದರಿ ಪ್ರಯಾಣಿಕರ ವೈದ್ಯಕೀಯ ವೆಚ್ಚವನ್ನು ನಿಗಮವು ಭರಿಸಲಿದೆ ಎಂದು ಹೇಳಿದೆ.
ಉಡುಪಿ :ಸೆ. 10 ರಂದು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ – Vishwanews24
