ಪುತ್ತೂರು : ಮಣ್ಣಿನಡಿಯಲ್ಲಿ ಸಿಲುಕಿದ್ದ ಇಬ್ಬರು ಕಾರ್ಮಿಕರ ಸಾವು -Vishwanews24
ಪುತ್ತೂರು : ಮಣ್ಣಿನಡಿಯಲ್ಲಿ ಸಿಲುಕಿದ್ದ ಇಬ್ಬರು ಕಾರ್ಮಿಕರ ಸಾವು -Vishwanews24
ಪುತ್ತೂರು: ಆರ್ಲಪದವಿನಲ್ಲಿ ಕೋಳಿತಾಜ್ಯದ ಗುಂಡಿ ಮುಚ್ಚುವ ವೇಳೆ ಮಣ್ಣಿನಡಿಯಲ್ಲಿ ಸಿಲುಕಿದ್ದ ಇಬ್ಬರು ಕಾರ್ಮಿಕರು ಕೂಡಾ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಪಾರ್ಕಳ ಕಾಲನಿ ನಿವಾಸಿಗಳಾದ ರವಿ (24) ಮತ್ತು ಬಾಬು (34) ಸಾವಿಗೀಡಾದ ಕಾರ್ಮಿಕರು.
ಜೀವಗಳನ್ನು ಉಳಿಸೋಣ, ನಮ್ಮ ಸ್ವಂತ ಬ್ಲಡ್ ಬ್ಯಾಂಕ್ ಶೀಘ್ರದಲ್ಲೇ ಬರಲಿದೆ : ಸೋನು ಸೂದ್ -Vishwanews24
ಕೋಳಿ ತ್ಯಾಜ್ಯ ಹಾಕುತ್ತಿದ್ದ ಗುಂಡಿನ ಪೈಪ್ ಸರಿಪಡಿಸಲು ಕಾರ್ಮಿಕರು ಇಳಿದಿರುವ ವೇಳೆ ಪೈಪ್ ಮುರಿದ ಕಾರಣ ಇಬ್ಬರು ಕಾರ್ಮಿಕರು ಆ ಹೊಂಡಕ್ಕೆ ಬಿದ್ದಿದ್ದಾರೆ ಎನ್ನಲಾಗಿದ್ದು, ಈ ಸಂದರ್ಭದಲ್ಲೇ ಪಕ್ಕದಲ್ಲಿಯೇ ಜೆಸಿಬಿ ಮಣ್ಣು ಅಗೆಯುತ್ತಿದ್ದುದ್ದರಿಂದ ಮಣ್ಣು ಜರಿದು ಹೊಂಡಕ್ಕೆ ಬಿದ್ದಿದೆ ಎಂದು ಹೇಳಲಾಗಿದೆ.
ಬಳಿಕ ಕಾರ್ಮಿಕರ ರಕ್ಷಣಾ ಕಾರ್ಯ ನಡೆಸಲಾಗಿದ್ದು ಇಬ್ಬರು ಕಾರ್ಮಿಕರು ಭೂ ಸಮಾಧಿಯಾಗಿದ್ದಾರೆ ಎಂದು ಮಾಹಿತಿ ಲಭಿಸಿದೆ. ಸಂಪ್ಯಾ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ವಿಧಾನಸಭೆ ಅಧಿವೇಶನ: ‘ಒಂದು ದೇಶ ಒಂದು ಚುನಾವಣೆ’ ; ಕಾಂಗ್ರೆಸ್ ತೀವ್ರ ವಿರೋಧ -Vishwanews24
