ಪುತ್ತೂರು: ಮನೆಯಲ್ಲೇ ಬೆಳೆದ ಹರಿವೆ ಸೊಪ್ಪಿನ ಪದಾರ್ಥ ಸೇವಿಸಿ ಮೂವರು ಅಸ್ವಸ್ಥ – ಆಸ್ಪತ್ರೆಗೆ ದಾಖಲು – Vishwanews24

Featured, ದಕ್ಷಿಣ ಕನ್ನಡ

ಪುತ್ತೂರು: ಮನೆಯಲ್ಲೇ ಬೆಳೆದ ಹರಿವೆ ಸೊಪ್ಪಿನ ಪದಾರ್ಥ ಸೇವಿಸಿ ಮೂವರು ಅಸ್ವಸ್ಥ – ಆಸ್ಪತ್ರೆಗೆ ದಾಖಲು

ಪುತ್ತೂರು: ಮನೆಯಲ್ಲೇ ಬೆಳೆದ ಹರಿವೆ ಸೊಪ್ಪಿನ ಪದಾರ್ಥ ಸೇವಿಸಿ ಅಸ್ವಸ್ಥಗೊಂಡು ಮೂವರು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೆಳ್ಳಿಪ್ಪಾಡಿ ಗ್ರಾಮದ ಕೈಲಾಜೆ ಎಂಬವಲ್ಲಿ ನಡೆದಿದೆ.

ಬೆಳ್ಳಿಪ್ಪಾಡಿಯ ಕೈಲಾಜೆ ಕೊರಗಪ್ಪ ಗೌಡ ಹಾಗೂ ಅವರ ಪತ್ನಿ ಲಲಿತಾ ಹಾಗೂ ಮನೆಗೆ ಬಂದಿದ್ದ ರಮೇಶ ಅಡ್ಕರಗುರಿ ಆಸ್ಪತ್ರೆಗೆ ದಾಖಲಾದವರು.

ಕೈಲಾಜೆ ಕೊರಗಪ್ಪ ಗೌಡ ಮನೆಯಲ್ಲಿ ಮಧ್ಯಾಹ್ನದ ಊಟಕ್ಕೆ ತಮ್ಮ ಮನೆಯಲ್ಲಿಯೇ ಬೆಳೆದ ಹರಿವೆಯ ಪದಾರ್ಥ ಮಾಡಿದ್ದರು. ಎಂದಿನಂತೆ ಮಧ್ಯಾಹ್ನ ಊಟ ಸೇವಿಸಿದ್ದವರು. ಸಂಜೆಯಾಗುತ್ತಲೇ ಪದಾರ್ಥ ಸೇವಿಸಿದ್ದ ಮೂವರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ತೀವ್ರವಾಗಿ ಆಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ.

ಇಂದು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ರೋಡ್ ಶೋ ನಡೆಸಲಿರುವ ಅಮಿತ್ ಶಾ – Vishwanews24

Leave a Reply