ಪುತ್ತೂರು: ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಭೂಮಾಪಕನಿಗೆ ಜೈಲು ಶಿಕ್ಷೆ – Vishwanews24

Featured, ದಕ್ಷಿಣ ಕನ್ನಡ

ಪುತ್ತೂರು: ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಭೂಮಾಪಕನಿಗೆ ಜೈಲು ಶಿಕ್ಷೆ

ಮಂಗಳೂರು : ಲಂಚಕ್ಕೆ ಬೇಡಿಕೆ ಇಟ್ಟು ಸಿಕ್ಕಿಬಿದ್ದಿದ್ದ ಪುತ್ತೂರು ಭೂಮಾಪನ ಇಲಾಖೆಯ ಭೂಮಾಪಕ ಮಹಾದೇವ ನಾಯಕ್‌ಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.

ಆರೋಪಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುವುದು ನ್ಯಾಯಾಲಯದಲ್ಲಿ ಸಾಬೀತಾಗಿದೆ. ಅಪರಾಧಿಗೆ 3.3 ವರ್ಷ ಜೈಲು ಹಾಗೂ 20 ಸಾವಿರ ರೂ. ದಂಡ ಎಧಿಸಿ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಿ.ಬಿ.ಜಕಾಶಿ ತೀರ್ಪು ನೀಡಿದ್ದಾರೆ.

ಸಿಎಂ‌ ಬೊಮ್ಮಾಯಿ ಪುತ್ರ, ಯುವ ಉದ್ಯಮಿ ಭರತ್ ಬೊಮ್ಮಾಯಿಗೆ ಅಂತರಾಷ್ಟ್ರೀಯ ಟೈಟಾನ್ ಬಿಸಿನೆಸ್ ಅವಾರ್ಡ್ – Vishwanews24

ಮಹಾದೇವ ನಾಯಕ್‌ ಆರ್ಯಾಪು ಗ್ರಾಮದ ವ್ಯಕ್ತಿಯೋರ್ವರ ಜಮೀನಿನ ಅಳತೆ ಮಾಡಿ ನಕ್ಷೆ ತಯಾರಿಸಿ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಗ್ಗೆ 2014ಮಾರ್ಚ್‌ 15ರಂದು ಲೋಕಾಯುಕ್ತ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಲೋಕಾಯುಕ್ತದಲ್ಲಿ ಆಗ ಇನ್‌ಸ್ಪೆಕ್ಟರ್‌, ಹಾಲಿ ಕಾರ್ಕಳ ಉಪ ವಿಭಾಗದ ಡಿವೈಎಸ್ಪಿಎಸ್‌. ವಿಜಯ ಪ್ರಸಾದ್‌ ಈ ಪ್ರಕರಣದ ತನಿಖೆ ನಡೆಸಿ, ಲೋಕಾಯುಕ್ತಕ್ಕೆ ದೋಷಾರೋಪಣಾ ಪಟ್ಟಿಸಲ್ಲಿಸಿದ್ದರು.

ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪಾಡಿ ಸರ್ಕಾರದ ಪರ ವಾದಿಸಿದ್ದರು.

Leave a Reply