ಪುತ್ತೂರು : ಶಕುಂತಲಾ ಶೆಟ್ಟಿಗೆ ಟಿಕೆಟ್ ನೀಡುವಂತೆ ಮಹಿಳಾ ಕಾಂಗ್ರೇಸ್ ಒತ್ತಾಯ – Vishwanews24
ಪುತ್ತೂರು :ಶಕುಂತಲಾ ಶೆಟ್ಟಿಗೆ ಟಿಕೆಟ್ ನೀಡುವಂತೆ ಮಹಿಳಾ ಕಾಂಗ್ರೇಸ್ ಒತ್ತಾಯ
ಪುತ್ತೂರು: ಮುಂದಿನ ವಿಧಾನಸಭಾ ಚುನಾವಣೆಯ ಪುತ್ತೂರು ಕಾಂಗ್ರೇಸ್ ಅಭ್ಯರ್ಥಿಯನ್ನಾಗಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿಯವರನ್ನು ಆಯ್ಕೆ ಮಾಡಬೇಕೆಂದು ಪುತ್ತೂರು ಬ್ಲಾಕ್ ಮಹಿಳಾ ಕಾಂಗ್ರೇಸ್ ಘಟಕ ಆಗ್ರಹಿಸಿದೆ.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷ ಶಾರದಾ ಅರಸ್ ಶಕುಂತಲಾ ಶೆಟ್ಟಿ ಪುತ್ತೂರು ಶಾಸಕಿಯಾಗಿದ್ದ ಸಂದರ್ಭದಲ್ಲಿ ಪುತ್ತೂರಿನ ಸರ್ವತೋಮುಖ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಅನುದಾನದ ರೂಪದಲ್ಲಿ ತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದಾರೆ.
ಅಲ್ಲದೆ ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯ ಗುರಿ ಹೊಂದಿದ್ದ ಅವರು ಈಗಾಗಲೇ 40. ಎಕರೆ ಜಾಗವನ್ನು ಮೆಡಿಕಲ್ ಕಾಲೇಜಿಗೆಂದೇ ಮೀಸಲಿಟ್ಟಿದ್ದಾರೆ. ಈ ಬಾರಿ ಅವರಿಗೆ ಪಕ್ಷದ ಹೈಕಮಾಂಡ್ ಟಿಕೆಟ್ ನೀಡಿ ಅವರ ಬಾಕಿಯಾಗಿ ಉಳಿದ ಅವರ ಕನಸುಗಳನ್ನು ಸಾಕಾರ ಮಾಡಲು ಪಕ್ಷ ಅವಕಾಶವನ್ನು ನೀಡಬೇಕೆಂದು ಅವರು ಆಗ್ರಹಿಸಿದರು.
SILVER SPIRIT- 6ನೇ ಐಷಾರಾಮಿ ವೆಸೆಲ್ ಬಂದರು ನಗರಿ ಮಂಗಳೂರಿಗೆ.. Vishwanews24
ರಾಜ್ಯದಲ್ಲಿ ಮಹಿಳಾ ಪರ ಹೋರಾಟಗಾರರಾಗಿಯೂ ಗುರುತಿಸಿಕೊಂಡಿರುವ ಶಕುಂತಲಾ ಶೆಟ್ಟಿ ಅವರಿಗೇ ಈ ಬಾರಿ ಪಕ್ಷದ ಟಿಕೆಟ್ ನೀಡಬೇಕೆಂದು ಅವರು ಆಗ್ರಹಿಸಿದರು
